ಕೊಟ್ಟಾಯಂ: ಮೀನಚಿಲ್ ತಾಲೂಕಿನ ವಿವಿಧೆಡೆ ಭೂಗರ್ಭದೊಳಗಿಂದ ಶಬ್ದ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಲಘು ಭೂಕಂಪನವಾಗಿರಬಹುದೆಂದು ಪ್ರಾಥಮಿಕ ಮಾಹಿತಿ. ಮಧ್ಯಾಹ್ನದ ಸುಮಾರಿಗೆ ಈ ಘಟನೆ ನಡೆದಿದೆ.
ಕೊಟ್ಟಾಯಂನ ಇಡಮಟ್ಟಂ, ಪಾಲಾ, ಭರಣಂಗನಂ, ಪೂವರಾಣಿ, ಪೂಂಜಾರ್ ಮತ್ತು ಪಣಚಿಪ್ಪಾರ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದೆ. ಘಟನೆಯ ಬಳಿಕ ಇಡುಕ್ಕಿಯಲ್ಲಿನ ಸಿಸ್ಮೋಗ್ರಾಫ್ ಚಲನವಲನವನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಬ್ದದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಘಟನೆಯ ನಂತರ ಭೂವಿಜ್ಞಾನ ಇಲಾಖೆ ತನಿಖೆ ಆರಂಭಿಸಿದೆ ಎಂದು ಗ್ರಾಮಾಧಿಕಾರಿ ತಿಳಿಸಿದ್ದಾರೆ. ತಪಾಸಣೆಯ ವಿವರಗಳನ್ನು ಪಡೆದ ನಂತರವೇ ಅಪಘಾತಗಳ ಅಪಾಯ ಮತ್ತು ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಣಯಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.




