ಕಾಸರಗೋಡು: ವಿದ್ಯಾರ್ಥಿನಿಯೊಬ್ಬಳಲ್ಲಿ ಬಲವಂತವಾಗಿ ಕಾಲುಮುಟ್ಟಿ ಕ್ಷಮೆಯಾಚಿಸಿದ ಬಗ್ಗೆ ದೂರು ದಾಖಲಾಗಿದೆ. ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ರೆಮಾ ವಿರುದ್ಧ ದೂರು ದಾಖಲಾಗಿದೆ.
ದೂರಿನ ಪ್ರಕಾರ, ಪ್ರಾಂಶುಪಾಲೆ ಪದವಿ ವಿದ್ಯಾರ್ಥಿನಿಯಿಂದ ಬಲವಂತವಾಗಿ ಮೂರು ಬಾರಿ ಕಾಲು ಮುಟ್ಟಿ ಕ್ಷಮೆ ಕೇಳಿಸಲಾಗಿದೆ ಎನ್ನಲಾಗಿದೆ.
ವಿದ್ಯಾರ್ಥಿನಿಯ ವಿರುದ್ಧ ಹಲವಾರು ದೂರುಗಳು ಬಂದಿದ್ದು, ವಿದ್ಯಾರ್ಥಿನಿಗೆ ಜಗಳ ಮಾಡಿ ಅವಮಾನಿಸಿ ಕಾಲೇಜಿನಿಂದ ಹೊರ ಹಾಕುವಂತೆ ಷರತ್ತು ವಿಧಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ವಿದ್ಯಾರ್ಥಿನಿ ಮುಖ್ಯಮಂತ್ರಿ ಹಾಗೂ ಡಿಜಿಪಿಗೆ ದೂರು ನೀಡಿದ್ದಾಳೆ. ಇದೇ ವೇಳೆ ವಿದ್ಯಾರ್ಥಿನಿ ಸ್ವಯಂ ಪ್ರೇರಿತಳಾಗಿ ಕಾಲುಮುಟ್ಟಿ ಕ್ಷಮೆ ಕೇಳಿದ್ದಾಳೆ ಎಂದು ಕಾಲೇಜು ಪ್ರಾಂಶುಪಾಲೆ ಡಾ.ಎಂ.ರೇಮಾ ತಿಳಿಸಿದ್ದಾರೆ.




