ಪತ್ತನಂತಿಟ್ಟ: ಶಬರಿಮಲೆ ಭೇಟಿಗೆ ಭಕ್ತರ ಸಂಖ್ಯೆಯನ್ನು ಹೆಚ್ಚಿಸುವ ಸೂಚನೆಗಳಿವೆ. ಡಿಸೆಂಬರ್ 1 ರಿಂದ ಪ್ರತಿದಿನ 50,000 ಜನರಿಗೆ ಪರವಾನಗಿ ನೀಡಲಾಗುವುದು ಎಂದು ಅಂದಾಜಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಷ್ಟು ಮಂದಿ ಬುಕ್ಕಿಂಗ್ ಮಾಡಿ ಬಂದಿದ್ದಾರೆ ಎನ್ನುವುದರ ಮೇಲೆ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ದಿನನಿತ್ಯದ ಕೊರೊನಾ ಸೋಂಕಿತರ ಪ್ರಮಾಣ ಮತ್ತೆ ಕಡಿಮೆಯಾದರೆ, ಹವಾಮಾನ ಅನುಕೂಲಕರವಾಗಿದ್ದರೆ ಮುಂದಿನ ತಿಂಗಳಿನಿಂದ ಹೆಚ್ಚಿನ ಭಕ್ತರಿಗೆ ಪ್ರವೇಶಾನುಮತಿ ನೀಡುವ ಸಾಧ್ಯತೆಯಿದೆ. ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾದರೆ ನೀಲಿಮಲ ಮಾರ್ಗ ತೆರೆಯುವ ಸಾಧ್ಯತೆ ಇದೆ.
ನಿನ್ನೆಗಿಂತ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದಾರೆ. ವರ್ಚುವಲ್ ಕ್ಯೂ ಮೂಲಕ ಸುಮಾರು 14,500 ಜನರು ಬುಕ್ ಮಾಡಿದ್ದರು. ಇದೇ ವೇಳೆ ಪಾರ್ಕಿಂಗ್ ಸ್ಥಳದಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಿ, ಆಗಿರುವ ಅನಾನುಕೂಲಗಳನ್ನು ಪರಿಹರಿಸಲಾಗುವುದು ಎಂದು ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಮಾಹಿತಿ ನೀಡಿದರು.ಈ ವರ್ಷದ ಭೇಟಿ ಆರಂಭಗೊಂಡಿದ್ದರೂ ವಾಹನ ನಿಲುಗಡೆ ಸ್ಥಳದಲ್ಲಿ ಶೌಚಾಲಯ, ಕುಡಿಯುವ ನೀರು, ಹೋಟೆಲ್‌ಗಳಂತಹ ಸಮರ್ಪಕ ಸೌಲಭ್ಯಗಳಿಲ್ಲ. ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ದೇವಸ್ವಂ ಸಚಿವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದ್ದಾರೆ.




