ಮಂಜೇಶ್ವರ: ವಾಣೀವಿಲಾಸ ಹಿರಿಯ ಪ್ರಾಥಮಿಕ ಶಾಲೆ ತೊಟ್ಟೆತ್ತೋಡಿಯಲ್ಲಿ ಮೀಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಭಾಕರ ರೈ ಇವರು ಕೊರೋನಾ ಜಾಗೃತಿಯ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವಿತ್ತರು. ಶಾಲಾ ಪ್ರಬಂಧಕ ಡಾ.ಜಯಪ್ರಕಾಶ ನಾರಾಯಣ ಟಿ.ಕೆ ಹಾಗೂ ಪಿ.ಟಿ.ಎ ಅಧ್ಯಕ್ಷ ಸಂತೋಷ್ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಕುಮಾರ್ ಟಿ.ಆರ್ ಉಪಸ್ಥಿತರಿದ್ದರು.




