ಬದಿಯಡ್ಕ: ಸಾಧನೆಯ ಮೊದಲ ಮೆಟ್ಟಲಲ್ಲಿ ಪುಟಾಣಿಗಳ ಸಾಧನೆ ಸಣ್ಣದಲ್ಲ. ಪುಟಾಣಿಗಳ ಸರಳ ಸಾಧನೆಗಳನ್ನೂ ಗುರುತಿಸಿ ಪ್ರೋತ್ಸಾಹಿಸುವುದರಿಂದ ಭವಿಷ್ಯದಲ್ಲಿ ಅರಳಲು ಅದು ಪ್ರೇರಣೆಯಾಗುತ್ತದೆ ಎಮದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.
ಎಡನೀರು ಮಠದ ಶ್ರೀಕೇಶವಾನಂದ ಭಾರತೀ ಎಜ್ಯುಕೇಶನಲ್ ಟ್ರಸ್ಟ್ ನ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ಇತ್ತೀಚೆಗೆ ನಡೆದ ಸನ್ಮಾನ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾಲಯದ ಪುಣಾಣಿಗಳಾದ ಪ್ರಣಮ್ಯ ಹಾಗೂ ಸೂರ್ಯಶ್ರೀ ಅವರಿಗೆ ಈ ಸಂದರ್ಭ ಅಭಿನಂದನ ಫಲಕ ಹಾಗೂ ಮಂತ್ರಾಕ್ಷತೆಯನ್ನು ನೀಡಿ ಶ್ರೀಗಳು ಈ ಸಂದರ್ಭ ಹರಸಿದರು.
ಶ್ರೀಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಅಧ್ಯಕ್ಷತೆ ವಹಿಸಿ ಪದಕ ಪ್ರದಾನಗೈದರು. ಜೊತೆಗೆ ಮಕ್ಕಳ ದಿನಾಚರಣೆಯ ಅ|ಂಗವಾಗಿ ಶಾಲಾ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಚೆಂಗಳ ಗ್ರಾ.ಪಂ.ಸದಸ್ಯ ಸಲೀಂ, ನಿವೃತ್ತ ಮುಖ್ಯೋಪಾಧ್ಯಾಯಿನಿ ಚಂದ್ರಕಲಾ ಬಾೈ ಉಪಸ್ಥಿತರಿದ್ದು ಶುಭಹಾರೈಸಿದರು. ನಿವೃತ್ತ ವಿದ್ಯಾಧಿಕಾರಿ ವೇಣುಗೋಪಾಲ, ನಿವೃತ್ತ ಮುಖ್ಯೋಪಾಧ್ಯಾಯ ಭವಾನಿಶಂಕರ ಉಪಸ್ಥಿತರಿದ್ದರು. ವಿದ್ಯಾಮಂದಿರ ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಶ್ರೀಗಳನ್ನು ಗೌರವಿಸಿದರು. ಶಿಕ್ಷಕಿಯರು ಶುಭಹಾರೈಸಿದರು. ಶ್ಯಾಮಲಾ ಟೀಚರ್ ಸ್ವಾಗತಿಸಿ, ವಂದಿಸಿದರು. ನಳಿನಿ ಟೀಚರ್ ನಿರೂಪಿಸಿದರು.




