ತಿರುವನಂತಪುರ: ಓಮಿಕ್ರಾನ್ ವಿಸ್ತರಣೆ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯದಲ್ಲಿ ರಾತ್ರಿ ನಿಯಂತ್ರಣ ಜ್ಯಾರಿಗೆ ಬರಲಿದೆ. ನಿಯಂತ್ರಣವು ಜನವರಿ 2 ರವರೆಗೆ ಇರುತ್ತದೆ. ಹೊಸ ವರ್ಷದ ಆಚರಣೆಯ ಸಂದರ್ಭಗಳನ್ನು ಗಣನೆಗೆ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ. 10 ಗಂಟೆಯೊಳಗೆ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. ಅನವಶ್ಯಕ ಪ್ರಯಾಣ ಮಾಡದಿರುವಂತೆ ಸೂಚಿಸಲಾಗಿದೆ. ನಿರ್ಬಂಧ ಹೇರಿರುವುದರಿಂದ ಚಿತ್ರಮಂದಿರಗಳಲ್ಲಿ ಸೆಕೆಂಡ್ ಶೋ ಇರುವುದಿಲ್ಲ ಎಂದು ಸರ್ಕಾರ ಘೋಷಿಸಿದೆ.

