ಉಪ್ಪಳ: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ ಶಬÀರಿಮಲೆ ಶ್ರೀ ಅಯ್ಯಪ್ಪ ದೀಪೆÇೀತ್ಸವದ ಸುವರ್ಣಮಹೋತ್ಸವ ಹಾಗೂ ಅಖಂಡ ಭಜನಾ ಸಂಕೀರ್ತನಾ ಮತ್ತು ತತ್ವಮಸಿ ಅನ್ನದಾನ ಮಂಟಪದ ಉದ್ಘಾಟನಾ ಸಮಾರಂಭ ಡಿ. 23ರಿಂದ ಆರಂಭಗೊಂಡು 26ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಡಿ.23ರಂದು ರಾತ್ರಿ ಪುಣ್ಯಾಹ, ವಾಸ್ತುಬಲಿ, 24ರಂದು ಬೆಳಿಗ್ಗೆ ನೂತನ ಸಂಭಾಂಗಣದಲ್ಲಿ ಗಣಪತಿ ಹೋಮ, ಬಳಿಕ ತತ್ವಮಸಿ ಅನ್ನದಾನ ಮಂಟಪದ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಂಬಯಿ ಹೇರಂಭಾ ಇಂಡಸ್ಟ್ರೀಸ್ ಚೆಯರ್ ಮೆನ್ ಸದಾಶಿವ ಕೆ.ಶೆಟ್ಟಿ ಕುಳೂರು ಕನ್ಯಾನ ಇವರು ಮಂಟಪವನ್ನು ಉದ್ಘಾಟಿಸುವರು. ಸಭೆಯಲ್ಲಿ ಭವಾನಿ ಗ್ರೂಪ್ ಆಫ್ ಕಂಪೆನಿಯ ಚಯರ್ ಮೆನ್ ಕುಸುಮೋದರ ಡಿ.ಶೆಟ್ಟಿ ಚೆಲ್ಲಡ್ಕ, ದಡ್ಡಂಗಡಿ ಅಧ್ಯಕ್ಷತೆ ವಹಿಸುವರು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ನಾರಾಯಣ ಹೆಗ್ಡೆ, ಅಂಬಾರು ಶ್ರೀ ಸದಾಶಿವ ಕ್ಷೇತ್ರದ ಆಡಳಿತ ಮೊಕ್ತೇಸರ ಕೃಷ್ಣಪ್ಪ ಪೂಜಾರಿ ದೇರಂಬಳ, ಮುಳಿಂಜ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಅಧ್ಯಕ್ಷ ಮುಳಿಂಜ ಹರಿನಾಥ ಭಂಡಾರಿ ಮುಖ್ಯ ಅತಿಥಿಗಳಾಗಿರುವರು. ಈ ಸಂದರ್ಭದಲ್ಲಿ ಸಿವಿಲ್ ಇಂಜಿನಿಯರ್ ಗುರುಪ್ರಸಾದ್ ಕೋಡಿಬೈಲ್ ಇವರನ್ನು ಸನ್ಮಾನಿಸಲಾಗುವುದು, ಗುರುಸ್ವಾಮಿ ಕುಟ್ಟಿಕೃಷ್ಣನ್, ಹಿರಿಯ ಸದಸ್ಯ ಕೊರಗಪ್ಪ ಶೆಟ್ಟಿ ಬೇರಿಕೆ, ಅಯ್ಯಪ್ಪ ಸೇವಾ ಸಮಿತಿಯ ಹಿರಿಯ ಪದಾಧಿಕಾರಿ ಯು.ಎಂ ಭಾಸ್ಕರ ಇವರನ್ನು ಗೌರವಿಸಲಾಗುವುದು. ಮಧ್ಯಾಹ್ನ 1.30ರಿಂದ ಅನ್ನದಾನ ನಡೆಯಲಿದೆ. 25ರಂದು ಬೆಳಿಗ್ಗೆ 5.30ಕ್ಕೆ ಗಣಪತಿ ಹೋಮ, 6.30ಕ್ಕೆ ಹರಿನಾಮ ಕೀರ್ತನೆ, 10.30ಕ್ಕೆ ಶ್ರೀ ದೇವರಿಗೆ ಪಂಚಾಮೃತಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಪೂಜೆ, 1 ರಿಂದ ಅನ್ನದಾನ, ಸಂಜೆ 6ರಿಂದ ಭಜನಾ ಸಂಕೀರ್ತನೆ ಪ್ರಾರಂಭ ಮೊದಲಾದ ಕಾರ್ಯಕ್ರಮ ನಡೆಯಲಿದೆ. 26 ರಂದು ಬೆಳಿಗ್ಗೆ 6ಕ್ಕೆ ಮಂಗಳಾಚರಣೆಯೊಂದಿಗೆ ಸಂಪನ್ನಗೊಳ್ಳಲಿದೆ.

