ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದುಬರುತ್ತಿರುವ ಧನುಸಂಕ್ರಮಣ ಶ್ರೀ ಭೂತಬಲಿ ಮಹೋತ್ಸವವು ಬುಧವಾರ ಹಾಗೂ ಗುರುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನವಾಯಿತು. ಗುರುವಾರ ಬೆಳಗ್ಗೆ ಶ್ರೀದೇವರ ಬಲಿ ಉತ್ಸವ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ ಸಂದರ್ಭದಲ್ಲಿ ಊರಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು. ಕೋವಿಡ್ ಕಾರಣಗಳಿಂದ ಕಳೆದ ಬಾರಿ ಜಾತ್ರಾ ಮಹೋತ್ಸವವು ಸೀಮಿತ ವ್ಯವಸ್ಥೆಗಳೊಂದಿಗೆ ನಡೆಸಲಾಗಿತ್ತು. ಈ ಬಾರಿ ಭÀಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

