ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವಿಂಶತಿ ವರ್ಷದ ಅಂಗವಾಗಿ ಡಿ.26 ರಂದು ಮಧ್ಯಾಹ್ನ 2.30 ರಿಂದ ಕನ್ನಡ ಭವನ ಗ್ರಂಥಾಲಯ ಸಭಾಂಗಣದಲ್ಲಿ ಗುರುನಮನ, ಹಾಸ್ಯ ಕವಿಗೋಷ್ಠಿ, ಹಾಸ್ಯ ಕಥಾಗೋಷ್ಠಿ ನಡೆಯಲಿದೆ.
ಕಾರ್ಯಕ್ರಮವನ್ನು ಹಿರಿಯ ಕವಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಉದ್ಘಾಟಿಸುವರು. ಹಿರಿಯ ಕವಿ, ವ್ಯಂಗ್ಯಚಿತ್ರ ಕಲಾವಿದ ವೆಂಕಟ ಭಟ್ ಎಡನೀರು ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ವೈ.ಸತ್ಯನಾರಾಯಣ ಕಾಸರಗೋಡು, ಹಿರಿಯ ಸಾಹಿತಿ, ಕವಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ಮತ್ತು ಹಿರಿಯ ಕವಿ ನರಸಿಂಹ ಭಟ್ ಯೇತಡ್ಕ ಅವರಿಗೆ ಗುರುನಮನ ನಡೆಯಲಿದೆ. ಕವಿ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಕಾಸರಗೋಡು ಮತ್ತು ಕವಿಗಳು ಎಂಬ ವಿಷಯವನ್ನು ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿ ಯುವ ಪ್ರತಿಭೆ, ವ್ಯಂಗ್ಯಚಿತ್ರ ಕಲಾವಿದ ಆದ್ಯಂತ್ ಅಡೂರು ಅವರಿಗೆ ಕನ್ನಡ ಭವನ ಮತ್ತು ಗ್ರಂಥಾಲಯದ ಭರವಸೆಯ ಬೆಳಕು ಪ್ರಥಮ ಬಾಲಪ್ರತಿಭಾ ಪುರಸ್ಕಾರ 2021 ನೀಡಿ ಗೌರವಿಸಲಾಗುವುದು. ಆಹ್ವಾನಿತ ಕವಿಗಳು ಮತ್ತು ಕಥೆಗಾರರು ಭಾಗವಹಿಸುವರು.




