ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಾಂಸ್ಕøತಿಕ ಅಧ್ಯಯನ ಕೇಂದ್ರದಲ್ಲಿ ಇತ್ತೀಚೆಗೆ ಸಂಘದ ಕಲಾವಿದರಿಂದ "ಪಾರ್ಥಸಾರಥ್ಯ" ಯಕ್ಷಗಾನ ತಾಳಮದ್ದಳೆಯು ಅತ್ಯಂತ ಮನೋಜ್ಞವಾಗಿ ಮೂಡಿಬಂತು. ಸ್ಥಳಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ಸ್ವಾಮಿಯ ಪೂಜಾರಾಧನೆಯೊಂದಿಗೆ ಸಂಘದ ಹಿರಿಯ ಭಾಗವತ ವಿಶ್ವವಿನೋದ ಬನಾರಿ ಅವರ ನಿರ್ದೇಶನದೊಂದಿಗೆ ಪ್ರಸ್ತುತಗೊಂಡ ಯಕ್ಷಗಾನ ತಾಳಮದ್ದಳೆಯ ಭಾಗವತರಾಗಿ ದಯಾನಂದ ಬಂದ್ಯಡ್ಕ, ನಿತೀಶಿ ಕುಮಾರ್ ಎಂಕಣ್ಣಮೂಲೆ ಅವರು ರಂಜಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣು ಶರಣ ಬನಾರಿ, ನಾರಾಯಣ ಪಾಟಾಳಿ ಮಯ್ಯಾಳ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಅವರು ಕಾಣಿಸಿಕೊಂಡರು. ಯಂ.ರಮಾನಂದ ರೈ ದೇಲಂಪಾಡಿ, ಡಿ. ರಾಮಣ್ಣ ಮಾಸ್ತರ್ ದೇಲಂಪಾಡಿ, ನಾರಾಯಣ ದೇಲಂಪಾಡಿ, ವಿಕೇಶ್ ರೈ ಶೇಣಿ ಅವರು ತಮ್ಮ ಅರ್ಥಗಾರಿಕೆಯಿಂದ ಜನರನ್ನು ಮುದಗೊಳಿಸಿದರು. ನಂದಕಿಶೋರ ಬನಾರಿ ಸ್ವಾಗತಿಸಿ, ಗೋಪಾಲಕೃಷ್ಣ ಮುದಿಯಾರು ವಂದಿಸಿದರು.




