HEALTH TIPS

ಗುಜರಾತ್‍ನ 94 ವರ್ಷದ ಬಾಲಕೃಷ್ಣ ದೋಷಿ ಅವರಿಗೆ ಆರ್ಕಿಟೆಕ್ಚರ್ ಕ್ಷೇತ್ರದ ರಾಯಲ್ ಗೋಲ್ಡ್ ಮೆಡಲ್

              ಅಹ್ಮದಾಬಾದ್: ಅಹ್ಮದಾಬಾದ್ ಮೂಲದ ಬಾಲಕೃಷ್ಣ ದೋಷಿ (94) ಅವರು ಆರ್ಕಿಟೆಕ್ಚರ್ ಕ್ಷೇತ್ರದ ಜಗತ್ತಿನ ಅತ್ಯುನ್ನತ ಪ್ರಶಸ್ತಿಯಾದ ರಾಯಲ್ ಗೋಲ್ಡ್ ಮೆಡಲ್ 2022ಗೆ ಆಯ್ಕೆಯಾಗಿದ್ದಾರೆ. ರಾಯಲ್ ಇನ್‍ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್ ನೀಡುವ ಈ ಪ್ರಶಸ್ತಿಯನ್ನು ದೋಷಿ ಅವರ ಸಾಧನೆಗಳಿಗೆ ಮನ್ನಣೆಯಾಗಿ ನೀಡಲಾಗಿದೆ.

             ತಮ್ಮ ಏಳು ದಶಕಗಳಿಗೂ ಅಧಿಕ ಸಮಯದ ವೃತ್ತಿ ಜೀವನದಲ್ಲಿ ದೋಷಿ ಅವರು ದೇಶಾದ್ಯಂತ 100ಕ್ಕೂ ಅಧಿಕ ಯೋಜನೆಗಳನ್ನು ನಿರ್ಮಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಶೆಷ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.

                ದೋಷಿ ಅವರು ನಿರ್ಮಿಸಿದ ಕೆಲವೊಂದು ಪ್ರಮುಖ ಕಟ್ಟಡಗಳಲ್ಲಿ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಾಯನ್ಸ್, ಅಹ್ಮದಾಬಾದ್‍ನಲ್ಲಿರುವ ಅವರ ಸ್ಟುಡಿಯೋ-ಸಂಗತ್, ಅಹ್ಮದಾಬಾದ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ (2002ರಿಂದ ಇದರ ಹೆಸರು ಸಿಇಪಿಟಿ ಯುನಿವರ್ಸಿಟಿ), ಅರಣ್ಯ ಲೋ ಕಾಸ್ಟ್ ಹೌಸಿಂಗ್, ಇಂದೋರ್ ಸೇರಿವೆ.

         ಈ ಹಿಂದೆ ಪ್ರತಿಷ್ಠಿತ ಪ್ರಿಟ್ಝ್‍ಕರ್ ಪ್ರಶಸ್ತಿಯನ್ನು ಪಡೆದಿರುವ ದೋಷಿ ಅವರು ದೇಶದಲ್ಲಿ ಆರ್ಕಿಟೆಕ್ಚರ್ ಶಿಕ್ಷಣ ಕ್ಷೇತ್ರದಲ್ಲೂ ಮಹತ್ತರ ಕೊಡುಗೆ ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries