ನವದೆಹಲಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಬೇಟಿ ಬಚಾವೊ ಯೋಜನೆಯಡಿ 2016ರಿಂದ 2019ರ ಅವಧಿಯಲ್ಲಿ ವೆಚ್ಚವಾದ 446.72 ಕೋಟಿ ರೂಪಾಯಿಗಳ ಪೈಕಿ ಶೇಕಡ 78.91ರಷ್ಟು ಮೊತ್ತ ಮಾಧ್ಯಮ ಪ್ರಚಾರಕ್ಕೆ ಖರ್ಚಾಗಿದೆ ಎನ್ನುವ ಅಂಶವನ್ನು ಸಂಸದೀಯ ಸಮಿತಿಯ ವರದಿ ಬಹಿರಂಗಪಡಿಸಿದೆ.
0
samarasasudhi
ಡಿಸೆಂಬರ್ 11, 2021
ನವದೆಹಲಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಬೇಟಿ ಬಚಾವೊ ಯೋಜನೆಯಡಿ 2016ರಿಂದ 2019ರ ಅವಧಿಯಲ್ಲಿ ವೆಚ್ಚವಾದ 446.72 ಕೋಟಿ ರೂಪಾಯಿಗಳ ಪೈಕಿ ಶೇಕಡ 78.91ರಷ್ಟು ಮೊತ್ತ ಮಾಧ್ಯಮ ಪ್ರಚಾರಕ್ಕೆ ಖರ್ಚಾಗಿದೆ ಎನ್ನುವ ಅಂಶವನ್ನು ಸಂಸದೀಯ ಸಮಿತಿಯ ವರದಿ ಬಹಿರಂಗಪಡಿಸಿದೆ.
"ಬೇಟಿ ಬಚಾವೊ ಬೇಟಿ ಪಡಾವೊ" ಅಭಿಯಾನದ ಸಂದೇಶವನ್ನು ಸಮಾಜದಲ್ಲಿ ಹರಡಲು ಮಾಧ್ಯಮ ಪ್ರಚಾರ ಅಗತ್ಯ ಎನ್ನುವುದನ್ನು ಸಮಿತಿ ಪ್ರತಿಪಾದಿಸಿದ್ದರೂ, ಯೋಜನೆಯ ಉದ್ದೇಶಗಳ ಈಡೇರಿಕೆಗೆ ಹಣ ಖರ್ಚು ಮಾಡುವಲ್ಲಿ ಸಮತೋಲನ ಸಾಧಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ.
ಹಿಂದುಳಿದ ಪ್ರದೇಶಗಳಲ್ಲಿ ಲಿಂಗಾನುಪಾತ ಹೆಚ್ಚಳ ಮತ್ತು ಹೆಣ್ಣುಮಕ್ಕಳ ಶಿಕ್ಷಣವನ್ನು ಖಾತರಿಪಡಿಸುವುದು ಯೋಜನೆಯ ಮುಖ್ಯ ಉದ್ದೇಶ. ಈ ಹಿನ್ನೆಲೆಯಲ್ಲಿ ಸರ್ಕಾರ ಬಿಬಿಬಿಪಿ ಯೋಜನೆಯಡಿ ಜಾಹೀರಾತಿಗೆ ಮಾಡುವ ವೆಚ್ಚವನ್ನು ಪುನರ್ ಪರಿಶೀಲಿಸಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ವಲಯವಾರು ಹಸ್ತಕ್ಷೇಪಕ್ಕೆ ಯೋಜಿತ ವೆಚ್ಚ ಹಂಚಿಕೆ ಮಾಡಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.
ಕೋವಿಡ್ ಕಾರಣದಿಂದ ಹಣಕಾಸು ಮುಗ್ಗಟ್ಟು ಇದ್ದ 2020-21ನ್ನು ಹೊರತುಪಡಿಸಿ ಯೋಜನೆ 2014-15ರಲ್ಲಿ ಆರಂಭವಾದಾಗಿನಿಂದ 2019-20ರವರೆಗೆ ಬಿಬಿಬಿಪಿ ಯೋಜನೆಗೆ ಒಟ್ಟು 848 ಕೋಟಿ ಬಿಡುಗಡೆಯಾಗಿದ್ದು, ಈ ಪೈಕಿ ರಾಜ್ಯಗಳಿಗೆ 622.48 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎನ್ನುವುದನ್ನು ವರದಿ ಉಲ್ಲೇಖಿಸಿದೆ. ರಾಜ್ಯಗಳು ಯೋಜನೆಯ ಒಟ್ಟು ಶೇಕಡ 25.13ರಷ್ಟು ಮೊತ್ತವನ್ನು ಮಾತ್ರ ಯೋಜನೆಯ ಮೂಲ ಉದ್ದೇಶಗಳಿಗೆ ವೆಚ್ಚ ಮಾಡಿವೆ ಎಂದು ಹೇಳಿದೆ.