ಕಣ್ಣೂರು: ಕಣ್ಣೂರು ವಿವಿ ಉಪಕುಲಪತಿ ಮರು ನೇಮಕಕ್ಕೆ ಶಿಫಾರಸು ಮಾಡಿ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಅವರು ರಾಜ್ಯಪಾಲರಿಗೆ ಕಳುಹಿಸಿರುವ ಪತ್ರ ಬಹಿರಂಗಗೊಂಡಿದೆ. ವಿಸಿ ನೇಮಕ ಅರ್ಜಿಯನ್ನು ಹಿಂಪಡೆಯುವಂತೆ ಸಚಿವರು ತಿಳಿಸಿರುವರು. ವಿಸಿ ಮರು ನೇಮಕಕ್ಕೆ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿತ್ತು ಎಂಬ ಟೀಕೆಗಳು ಈ ಹಿಂದೆಯೇ ಎದ್ದಿದ್ದವು. ಅಷ್ಟರಲ್ಲಿ ಪತ್ರ ಬಹಿರಂಗಗೊಂಡಿದೆ.
ವಿಶ್ವವಿದ್ಯಾಲಯದ ನಿಯಮಗಳನ್ನು ಧಿಕ್ಕರಿಸಿ ಸರ್ಕಾರ ಉಪಕುಲಪತಿ ಗೋಪಿನಾಥ್ ರವೀಂದ್ರನ್ ಅವರನ್ನು ಮರು ನೇಮಕ ಮಾಡಿತ್ತು. ಗೋಪಿನಾಥ್ ರವೀಂದ್ರನ್ ಅವರ ಅವಧಿ ನವೆಂಬರ್ 2021 ರಲ್ಲಿ ಮುಕ್ತಾಯಗೊಳ್ಳಲಿದ್ದು, ಕಾಲಾವಧಿ ವಿಸ್ತರಿಸಬೇಕು ಮತ್ತು ಅವರನ್ನು ಪೆÇ್ರ ವೈಸ್ ಚಾನ್ಸೆಲರ್ ಆಗಿ ನಾಮನಿರ್ದೇಶನ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಗೋಪಿನಾಥ್ ರವೀಂದ್ರನ್ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯ ಸಾಧನೆಗಳನ್ನು ದಾಖಲಿಸಿದೆ. ಅವರು ಹೊಸ ಸಂಶೋಧನಾ ನಿರ್ದೇಶನಾಲಯವನ್ನು ಪ್ರಾರಂಭಿಸಲು ಉಪಕ್ರಮವನ್ನು ತೆಗೆದುಕೊಂಡರು. ಗೋಪಿನಾಥ್ ಅವರ ಅವಧಿಯನ್ನು ವಿಸ್ತರಿಸಿದರೆ ವಿಶ್ವವಿದ್ಯಾಲಯಕ್ಕೆ ಅನುಕೂಲವಾಗಲಿದೆ. ಕಣ್ಣೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿ ವಯೋಮಿತಿ ಇಲ್ಲ ಎಂದೂ ಪತ್ರದಲ್ಲಿ ತಿಳಿಸಲಾಗಿದೆ. ಇದೇ ವೇಳೆ ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿ ನೇಮಕಕ್ಕೆ ಸಹಿ ಹಾಕಿರುವುದು ಒತ್ತಡದ ಕಾರಣ ಎಂದು ರಾಜ್ಯಪಾಲರು ಬಹಿರಂಗಪಡಿಸಿದ್ದರು.

