ನವದೆಹಲಿ: 'ಮುಂದಿನ ಐದು ದಿನಗಳಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಗುಜರಾತ್‌ನ ಕೆಲವೆಡೆ ಹಾಗೂ ರಾಜಸ್ಥಾನದ ಉತ್ತರ ಭಾಗಗಳಲ್ಲಿ ಶೀತಗಾಳಿಯು ತೀವ್ರವಾಗುವ ಸಾಧ್ಯತೆ ಇದೆ' ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
0
samarasasudhi
ಡಿಸೆಂಬರ್ 18, 2021
ನವದೆಹಲಿ: 'ಮುಂದಿನ ಐದು ದಿನಗಳಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಗುಜರಾತ್‌ನ ಕೆಲವೆಡೆ ಹಾಗೂ ರಾಜಸ್ಥಾನದ ಉತ್ತರ ಭಾಗಗಳಲ್ಲಿ ಶೀತಗಾಳಿಯು ತೀವ್ರವಾಗುವ ಸಾಧ್ಯತೆ ಇದೆ' ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
'ಮುಂದಿನ ನಾಲ್ಕೈದು ದಿನಗಳಲ್ಲಿ ದೇಶದ ಮಧ್ಯ ಭಾಗಗಳಲ್ಲಿ, ಗುಜರಾತ್ ಹಾಗೂ ವಾಯವ್ಯ ಭಾರತದ ಬಹುತೇಕ ಕಡೆಗಳಲ್ಲಿ ಪಾದರಸದ ಮಟ್ಟವು ಎರಡರಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಯುವ ಸೂಚನೆ ಇದೆ. ಅಂತೆಯೇ, ಭಾರತದ ಪೂರ್ವ ಹಾಗೂ ಮಹಾರಾಷ್ಟ್ರದ ಬಹುತೇಕ ಕಡೆಗಳಲ್ಲಿ ಕನಿಷ್ಠ ತಾಪಮಾನವು ಎರಡರಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಲಿದೆ' ಎಂದು ಇಲಾಖೆಯು ಮಾಹಿತಿ ನೀಡಿದೆ.
'ಡಿ.17ರಿಂದ ಡಿ.21ರ ಅವಧಿಯಲ್ಲಿ ಪಂಜಾಬ್, ಹರಿಯಾಣ, ಚಂಡೀಗಡ, ಸೌರಾಷ್ಟ್ರ ಮತ್ತು ಕಚ್‌ನಲ್ಲಿ ತೀವ್ರ ಶೀತಗಾಳಿ ಬೀಸುವ ಸಾಧ್ಯತೆ ಇದೆ. ರಾಜಸ್ಥಾನದ ಉತ್ತರ ಭಾಗದಲ್ಲಿ ಡಿ.18ರಿಂದ ಡಿ.21ರವರೆಗೆ, ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಡಿ.19 ರಿಂದ ಡಿ.21ರವರೆಗೆ ಮತ್ತು ಗುಜರಾತ್‌ನಲ್ಲಿ ಡಿ.19ರಿಂದ 20ರವರೆಗೆ ಶೀತಗಾಳಿ ಬೀಸುವ ಸಾಧ್ಯತೆ ಇದೆ' ಎಂದು ತಿಳಿಸಿದೆ.