HEALTH TIPS

ಕಳಚಿತು ಟಿಕಾಯತ್‌ ಮುಖವಾಡ: ಝೂಮ್‌ ಮೀಟಿಂಗ್‌ನಲ್ಲಿ ದಾಖಲೆ ಸಹಿತ ಸಿಕ್ಕಿತು ಕರಾಳ ಚಿತ್ರಣ

          ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ರೈತರ ಹೆಸರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಕೊನೆಗೂ ಮುಗಿದಿದೆ. ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆದಿದೆ.

            ಆದರೆ ಮೊದಲಿನಿಂದಲೂ ಈ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತ ಬಂದಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್‌ ಬಗ್ಗೆ ಇದಾಗಲೇ ಹಲವಾರು ಆರೋಪಗಳು ಕೇಳಿಬಂದಿವೆ. ಇವರಿಗೆ ಇದ್ದುದು ರೈತರ ಪರ ಕಾಳಜಿ ಅಲ್ಲ, ಬದಲಿಗೆ ಕೇಂದ್ರ ಸರ್ಕಾರಕ್ಕೆ ಮಸಿ ಬಳಿಯಲು ರೈತರನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಮೊದಲಿನಿಂದಲೂ ಇದೆ. ಇವರು ಸಹಸ್ರಾರು ಕೋಟಿ ರೂಪಾಯಿಗಳ ಒಡೆಯರಾಗಿದ್ದು, ರೈತರ ಹೆಸರಿನಲ್ಲಿ ಹೀನ ಕೃತ್ಯ ಮಾಡುತ್ತಿದ್ದಾರೆ ಎಂಬ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿವೆ, ಆಗುತ್ತಲೇ ಇವೆ. ಇವರ ಬೆಂಬಲಿಗರು ಮತ್ತು ಅಭಿಮಾನಿಗಳು ತಮ್ಮ ನಾಯಕ ಈತ ಎನ್ನುತ್ತಲೇ ಬಂದಿದ್ದಾರೆ.

              'ರಾಕೇಶ್ ಟಿಕಾಯತ್ ಭಯೋತ್ಪಾದಕ. ಕೇಂದ್ರ ಸರ್ಕಾರವು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದರಿಂದ ರೈತರಿಗೆ ನಷ್ಟ ಮತ್ತು ಖಲಿಸ್ತಾನಿ ಗೂಂಡಾಗಳಿಗೆ ಲಾಭವಾಗುತ್ತದೆ' ಎಂದು ಬಿಜೆಪಿ ನಾಯಕ ಹರಿನಾರಾಯಣ್ ರಾಜ್‌ಭರ್ ಈಚೆಗಷ್ಟೇ ಗಂಭೀರ ಆರೋಪ ಮಾಡಿದ್ದರು. ಈ ಮಾತಿಗೆ ಪುಷ್ಟಿ ಎಂಬಂತೆ 'ವೇರ್‌ ಈಸ್ ಪ್ರೂಫ್‌' ಟ್ವಿಟರ್‌ ಹ್ಯಾಂಡಲ್‌ ಮಾಡುತ್ತಿರುವ ಸಂಸ್ಥೆ ಟಿಕಾಯತ್‌ ಮುಖವಾಡವನ್ನು ಕಳಚಿದೆ.


           ಖಲಿಸ್ತಾನಿಗಳು ಮತ್ತು ಐಎಸ್‌ಐ ಏಜೆಂಟ್‌ ಜತೆ ಟಿಕಾಯತ್‌ ನಡೆಸಿರುವ ಝೂಮ್‌ ಮೀಟಿಂಗ್‌ನಲ್ಲಿ ನಡೆದಿರುವ ಚರ್ಚೆ ಈಗ ಬಯಲಿಗೆ ಬಂದಿದೆ.

               ರಾಜ್‌ ಕೌರ್‌ ಎಂಬ ಮಹಿಳೆ, ಕೌರ್‌ ಫಾರ್ಮರ್ಸ್ ಎಂಬ ಸಂಘಟನೆಯ ಮೂಲಕ ಈ ಝೂಮ್‌ ಮೀಟಿಂಗ್‌ ನಡೆಸಿದ್ದಾರೆ. ಈ ಮೀಟಿಂಗ್‌ನಲ್ಲಿ ಖಲಿಸ್ತಾನದ ಹೋರಾಟಗಾರ ಮೋ ಧಾಲಿವಾಲ್‌ ಹಾಗೂ ಐಎಸ್‌ಎಸ್‌ ಬೇಹುಗಾರಿಕೆ ಸಂಸ್ಥೆಯ ಏಜೆಂಟ್‌ ಪೀಟರ್‌ ಫೆಡ್ರಿಚ್‌ ಭಾಗವಹಿಸಿದ್ದರು. '2020ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತದಲ್ಲಿ ರೈತರ ಪ್ರತಿಭಟನೆಯೆಂಬ ಅರಾಜಕತೆ ನಡೆದಿತ್ತು. ಅದು ಕೆಲವೇ ದಿನಗಳಲ್ಲಿ ನಿಲ್ಲುವ ಹಂತಕ್ಕೆ ಬಂದಾಗ ಅದನ್ನು ನಿಲ್ಲಲು ಕೊಡದೇ ಮುಂದುವರಿಸುವಂತೆ ಮಾಡಿರುವ ಧೀಮಂತ ವ್ಯಕ್ತಿಯೆಂದರೆ ಅದು ರಾಕೇಶ್‌ ಟಿಕಾಯತ್‌' ಎಂದು ರಾಜ್‌ ಕೌರ್‌, ಟಿಕಾಯತ್‌ ಅವರನ್ನು ಪರಿಚಯಿಸಿದ್ದಾರೆ!

                     ಟಿಕಾಯತ್‌ ಈ ಮೀಟಿಂಗ್‌ನಲ್ಲಿ ಮಾತನಾಡಿದ್ದು ಹೀಗೆ:

               'ಒಂದು ವೇಳೆ ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದರೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ಏಕೆಂದರೆ ಈ ಹೋರಾಟ ಒಂದು ನಿರ್ದಿಷ್ಟ ವಿಷಯಕ್ಕೆ ಸೀಮಿತವಾಗಿಲ್ಲ. 2024ರ ಚುನಾವಣೆ ಬರುವವರೆಗೂ ಒಂದಲ್ಲೊಂದು ವಿಷಯ ತೆಗೆದು ಹೋರಾಟ ಮುಂದುವರೆಸುತ್ತೇವೆ. ಒಂದೊಮ್ಮೆ ಕೃಷಿ ಕಾಯ್ದೆ ರದ್ದಾದರೇನಂತೆ? ಬಿಜಲಿ ಬಿಲ್‌ (ವಿದ್ಯುತ್‌ ಬಿಲ್) ವಿರುದ್ಧ ಹೋರಾಟ ಮಾಡುತ್ತೇವೆ. ಅದಾದ ಮೇಲೆ ಇನ್ನೊಂದು ಹುಡುಕುತ್ತೇವೆ. ಕೊನೆಗೆ ಬ್ಯಾಂಕ್‌ಗಳು ವಿಲೀನ ಆಗಿರುವ ಬಗ್ಗೆಯಾದರೂ ಹೋರಾಟ ಮುಂದುವರೆಸುತ್ತೇವೆ' ಎಂದು ಮೀಟಿಂಗ್‌ನಲ್ಲಿ ಟಿಯಾಕತ್‌ ಹೇಳಿದ್ದಾರೆ!

             ಒಟ್ಟಿನಲ್ಲಿ ಲೋಕಸಭೆ ಚುನಾವಣೆ ಬರುವವರೆಗೂ ಒಂದಿಲ್ಲೊಂದು ವಿಷಯದ ಮೇಲೆ ಹೋರಾಟ ಮುಂದುವರೆಯುತ್ತದೆ ಎಂದಿದ್ದಾರೆ. ಕೃಷಿ ಕಾನೂನು ನೆಪ ಮಾತ್ರ. ಚುನಾವಣೆ ಬರುವವರೆಗೂ ಹೋರಾಟ ಹೀಗೆಯೇ ಮುಂದುವರೆಸಿ ಎಂದು ಇದೇ ಸಂದರ್ಭದಲ್ಲಿ ಐಎಸ್‌ಎಸ್‌ ಬೇಹುಗಾರಿಕೆ ಸಂಸ್ಥೆಯ ಏಜೆಂಟ್‌ ಪೀಟರ್‌ ಫೆಡ್ರಿಚ್‌ ಹೇಳಿದ್ದಾನೆ.

             ಈ ಸಂದರ್ಭದಲ್ಲಿ ಇವರಿಗೆ ಒಂದು ಪ್ರಶ್ನೆ ಎದುರಾಗುತ್ತದೆ. ಭಾರತದಲ್ಲಿ ರೈತರ ಆತ್ಮಹತ್ಯೆ ಏಕೆ ಹೆಚ್ಚಾಗುತ್ತಿದೆ ಎಂದು. ಅದಕ್ಕೆ ಉತ್ತರಿಸಲು ಟಿಯಾಕತ್‌ ತಡವರಿಸಿದ್ದು, ಸ್ಪಷ್ಟ ಉತ್ತರ ಸಿಗದೇ ಚಡಪಡಿಸಿದ್ದಾರೆ. ಕೊನೆಗೆ ಬೆಂಬಲ ಬೆಲೆ ಸರಿಯಾಗಿ ಸಿಗುತ್ತಿಲ್ಲ, ಅದಕ್ಕೇ ಎಂಬ ಉತ್ತರ ಕೊಟ್ಟಿದ್ದಾರೆ.

ಭಾರತದಲ್ಲಿ ಮಹಿಳಾ ಕೃಷಿಕರ ಬಗ್ಗೆ ಕೇಳಿದ ಪ್ರಶ್ನೆಗೂ ಇವರ ಬಳಿ ಉತ್ತರ ಇರಲಿಲ್ಲ.

            ಅಷ್ಟೇ ಅಲ್ಲದೇ, ಕೆಲವು ಪ್ರದೇಶಗಳಲ್ಲಿ ಜಮಿನ್ದಾರಿ ಪದ್ಧತಿ ಇದೆ, ಇದರಿಂದ ರೈತರಿಗೆ ಸಮಸ್ಯೆ ಆಗುತ್ತಿದೆಯೇ ಎಂದು ಕೇಳಿದಾಗ, ಇಲ್ಲ‍ಪ್ಪ ಹಾಗೇನೂ ಇಲ್ಲ. ಎಲ್ಲರ ನಡುವೆ ಸೌಹಾರ್ದಯುತವಾದ ವಾತಾವರಣ ಇದೆ ಎಂದು ಸುಳ್ಳು ಹೇಳಿರುವುದು ದಾಖಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries