ಕಾಸರಗೋಡು: ಕೇರಳ ಸರ್ಕಾರದ ಜನದ್ರೋಹಕರ ಧೋರಣೆ ಕೈಬಿಡುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಎಂಎಸ್ ಕಾಸರಗೋಡು ಜಿಲ್ಲಾಸಮಿತಿ ವತಿಯಿಂದ ಕಾರ್ಮಿಕರ ಪ್ರತಿಭಟನಾ ಸಂಗಮ ಹಾಗೂ ಧರಣಿ ಹೊಸಬಸ್ ನಿಲ್ದಾಣ ಸನಿಹ ಶುಕ್ರವಾರ ನಡೆಯಿತು.
ಇಂಧನ ಬೆಲೆಯಲ್ಲಿ ರಾಜ್ಯ ಸರ್ಕಾರದ ತೆರಿಗೆ ಇಳಿಸಲು ತಯಾರಾಗಬೇಕು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕು, ಬೆಲೆಯೇರಿಕೆ ತಡೆಗಟ್ಟಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ನಡೆಯಿತು. ಬಿಎಂಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಪಿ.ಮುರಳೀಧರನ್ ಉದ್ಘಾಟಿಸಿದರು. ಬಿಎಂಎಸ್ ಜಿಲ್ಲಾಧ್ಯಕ್ಷ ಪಿ,ವಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಎನ್‍ಜಿಓ ಸಂಘ್ ಜಿಲ್ಲಾಧ್ಯಕ್ಷ ವಿಜಯನ್, ಬಿಪಿಇಎಫ್ ಜಿಲ್ಲಾಧ್ಯಕ್ಷ ನಾರಾಯಣನ್ ಕೊಟ್ಟೋಡಿ, ಕೃಷ್ಣನ್ ಕುಟ್ಟಿ, ಮನೀಶ್, ಬಿಎಂಎಸ್ ಜಿಲ್ಲಾ ಪದಾಧಿಕಾರಿಗಳಾದ ವಕೀಲ ಪಿ,ಮುರಳೀಧರನ್, ಕೆ.ರಾಘವನ್, ಅನಿಲ್ ಬಿ.ನಾಯರ್, ಕೆ.ಶ್ರೀನಿವಾಸನ್, ವಿಶ್ವನಾಥ ಶೆಟ್ಟಿ, ಕೆ.ದಿನೇಶ್, ಹರೀಶ್, ಸಿಂಧು ಮಾಯಿಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ಹೆಲಿಕಾಪ್ಟರ್ ದುರಂತದಲ್ಲಿ ವಿಧಿವಶರಾದ ಮಹಾಸೇನಾಧಿಪತಿ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಹಾಗೂ ಧೀರ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಎಂಎಸ್ ಗೋವಿಂದನ್ ಮಡಿಕೈ ಸ್ವಾಗತಿಸಿದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಟಿ. ಕೃಷ್ಣನ್ ವಂದಿಸಿದರು.




