ಕೊಚ್ಚಿ: ಕೇರಳಕ್ಕೆ ತಲುಪಿರುವ ಕೋಟ್ಯಂತರ ರೂ.ಗಳ ಲೆಕ್ಕವಿಲ್ಲದ ಹಣ ರವಾನೆ ಹಿನ್ನಲೆಯಲ್ಲಿ ಕಣ್ಣೂರು, ಕೊಚ್ಚಿ, ಪಾಲಕ್ಕಾಡ್ ಮತ್ತು ಕೊಲ್ಲಂನಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ದಾಳಿ ವೇಳೆ ಇಡಿ ಅಧಿಕಾರಿಗಳಿಗೆ ಆಘಾತಕಾರಿ ಮಾಹಿತಿ ಲಭಿಸಿದೆ.
ಪಾಪ್ಯುಲರ್ ಫ್ರಂಟ್ ದೇಶದ ವಿವಿಧೆಡೆ ತಪಾಸಣೆಗೆ ಅಡ್ಡಿಪಡಿಸಲು ಯತ್ನಿಸುತ್ತಿದೆ.ಪಾಪ್ಯುಲರ್ ಫ್ರಂಟ್ ವಿರುದ್ಧ ಸಮುದಾಯದಿಂದ ವಿರೋಧದ ಧ್ವನಿಗಳು ಏಳುತ್ತಿವೆ.
ಈ ಹಿನ್ನೆಲೆಯಲ್ಲಿ ಸಂಘಟನೆಯು 'ಬೇಟೆ' ಮತ್ತು 'ಮುಸ್ಲಿಮರನ್ನು ಬೇಟೆಯಾಡುವ' ಕಲ್ಪನೆಯನ್ನು ಮುಂದಿಟ್ಟಿದೆ.
ಕರಪತ್ರದ ಪ್ರಕಾರ, ಕೇಂದ್ರೀಯ ಸಂಸ್ಥೆಗಳು ಮುಸ್ಲಿಂ ಉದ್ಯಮಿಗಳು ಮತ್ತು ವ್ಯವಹಾರಗಳನ್ನು ಹಾಳುಮಾಡಲು ಪ್ರಯತ್ನಿಸುತ್ತಿವೆ ಎಂದಿದೆ.
ಪಾಪ್ಯುಲರ್ ಫ್ರಂಟ್ ನಡೆಸಿದ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆಯೂ ಎನ್ ಐಎ ತನಿಖೆ ನಡೆಸುತ್ತಿದೆ. ಸಮಾನಾಂತರ ದೂರವಾಣಿ ವಿನಿಮಯ ಕೇಂದ್ರಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು ಮತ್ತು ಪಾಪ್ಯುಲರ್ ಫ್ರಂಟ್ ನೇತೃತ್ವದಲ್ಲಿ ವಿನಿಮಯ ಕೇಂದ್ರಗಳು ನಡೆದಿವೆ ಎಂದು ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿವೆ.ಬಂಧಿತರು ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳ ಸಕ್ರಿಯ ಪಾಪ್ಯುಲರ್ ಪ್ರಂಟ್ ಕಾರ್ಯಕರ್ತರು.
ಎಂದಿನಂತೆ ಪಾಪ್ಯುಲರ್ ಫ್ರಂಟ್ ತನ್ನ ಹಿಡಿತವನ್ನು ಬಿಗಿಗೊಳಿಸತೊಡಗಿದಂತೆಯೇ ಮುಸ್ಲಿಂ ಉಗ್ರವಾದದೊಂದಿಗೆ ನಾಯಕತ್ವವೂ ಮುನ್ನೆಲೆಗೆ ಬಂದಿದೆ.




