HEALTH TIPS

ಸೇನಾ ಹೆಲಿಕಾಪ್ಟರ್‌ ದುರಂತ: ವಿಡಿಯೊ ಸೆರೆಹಿಡಿದಿದ್ದ ವ್ಯಕ್ತಿ ಫೋನ್ ವಿಧಿ ವಿಜ್ಞಾನ ಪರೀಕ್ಷೆಗೆ ರವಾನೆ: ವರದಿ

      ಚೆನ್ನೈ: ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಬಿಪಿನ್‌ ರಾವತ್‌ ಅವರು ಪ್ರಯಾಣಿಸುತ್ತಿದ್ದರು ಎನ್ನಲಾದ ಹೆಲಿಕಾಪ್ಟರ್‌ನ ಕೊನೇ ಕ್ಷಣದ ಹಾರಾಟವನ್ನು ಚಿತ್ರೀಕರಿಸಿದ್ದ ವ್ಯಕ್ತಿಯ ಮೊಬೈಲ್‌ ಫೋನ್‌ ಅನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
      ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಮತ್ತು ಇತರ 12 ಮಂದಿ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತಕ್ಕೀಡಾದ ವ್ಯಕ್ತಿಯ ಮೊಬೈಲ್ ಫೋನ್ ಅನ್ನು ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಕೊಯಮತ್ತೂರಿನ ಮದುವೆ ಛಾಯಾಗ್ರಾಹಕ ಜೋ ಅವರು ಡಿಸೆಂಬರ್ 8 ರಂದು ತಮ್ಮ ಸ್ನೇಹಿತ ನಜರ್ ಮತ್ತು ಅವರ ಕೆಲವು ಕುಟುಂಬ ಸದಸ್ಯರೊಂದಿಗೆ ಗುಡ್ಡಗಾಡು ನೀಲಗಿರಿ ಜಿಲ್ಲೆಯ ಕಟ್ಟೇರಿ ಪ್ರದೇಶಕ್ಕೆ ಫೋಟೋಗಳನ್ನು ಕ್ಲಿಕ್ಕಿಸಲು ಹೋಗಿದ್ದರು. ಈ ವೇಳೆ ಕುತೂಹಲದಿಂದ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಹೆಲಿಕಾಪ್ಟರ್‌ನ ವೀಡಿಯೊವನ್ನು ರೆಕಾರ್ಡ್ ಮಾಡಿದ್ದರು, ಬಳಿಕ ಅದು ಕೆಲವೇ ಕ್ಷಣಗಳಲ್ಲಿ ಅದು ಪತನಕ್ಕೀಡಾಗಿತ್ತು.
      ಮಂಜಿನ ನಡುವೆ ಹೆಲಿಕಾಪ್ಟರ್ ಕಣ್ಮರೆಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಈ ದುರಂತದ ತನಿಖೆ ನಡೆಯುತ್ತಿದ್ದು, ಪ್ರಕರಣದ ತನಿಖೆಯ ಭಾಗವಾಗಿ ಜಿಲ್ಲಾ ಪೊಲೀಸರು ಜೋ ಅವರ ಮೊಬೈಲ್ ಫೋನ್ ಅನ್ನು ಸಂಗ್ರಹಿಸಿ ಕೊಯಮತ್ತೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

              ನಿಷೇಧಿತ ಪ್ರದೇಶದಲ್ಲಿ ಓಡಾಟ
       ಛಾಯಾಗ್ರಾಹಕ ಮತ್ತು ಅವರೊಂದಿಗೆ ಇನ್ನೂ ಕೆಲವರು ಕಾಡು ಪ್ರಾಣಿಗಳ ಸಂಚಾರವಿರುವ ನಿಷೇಧಿತ ಪ್ರದೇಶವಾಗಿರುವ ದಟ್ಟ ಅರಣ್ಯ ಪ್ರದೇಶಕ್ಕೆ ಏಕೆ ಹೋಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ. ಅಲ್ಲದೆ, ಅಪಘಾತದ ಬಗ್ಗೆ ಸುಳಿವುಗಳನ್ನು ಸಂಗ್ರಹಿಸಲು ಪೊಲೀಸರು ಸಾಕ್ಷಿಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

      ಎಂಐ-17ವಿಎಚ್ ಹೆಲಿಕಾಪ್ಟರ್ ಬುಧವಾರ ಕೂನೂರಿನ ಕಟ್ಟೇರಿ-ನಂಜಪ್ಪನ್‌ಛತ್ರಂ ಪ್ರದೇಶದ ಅರಣ್ಯ ಕಣಿವೆಯಲ್ಲಿ ಪತನಗೊಂಡಿತ್ತು. ಅದರಲ್ಲಿ ಪ್ರಯಾಣಿಸುತ್ತಿದ್ದ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರೆ 11 ಮಂದಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಓರ್ವ ಐಎಎಫ್ ಸಿಬ್ಬಂದಿ ಬದುಕುಳಿದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries