ಕಾಸರಗೋಡು: ಬೀರಂತಬೈಲ್‍ನಲ್ಲಿರುವ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಮಂದಿರದಲ್ಲಿ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಮಹಿಳಾ ಸಮಾಜೋತ್ಸವದ ಪೂರ್ವಭಾವಿ ಸಭೆ ಜರಗಿತು.
2022 ಎಪ್ರಿಲ್ ತಿಂಗಳಲ್ಲಿ ಮಹಿಳಾ ಸಮಾಜೋತ್ಸವವನ್ನು ಕಾಸರಗೋಡಿನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ನಡೆದ ಸಭೆಯಲ್ಲಿ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಮಹಿಳಾ ಸಂಘದ ಗೌರವ ಅಧ್ಯಕ್ಷೆ ಆಶಾ ರಾಧಾಕೃಷ್ಣ ಅವರು ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಅಧ್ಯಕ್ಷೆ ಉಷಾ ಅಣಂಗೂರು, ಕಾರ್ಯದರ್ಶಿ ಸುಕನ್ಯಾ ಹರೀಶ್, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಕಾರ್ಯದರ್ಶಿ ಸತೀಶ್ ದೋಣಿಬಾಗಿಲು, ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಮೊದಲಾದವರು ಮಾರ್ಗದರ್ಶನ ನೀಡಿದರು. ಸಭೆÉಯಲ್ಲಿ ವಿವಿಧ ಉಪಸಂಘಗಳ ಪದಾಧಿಕಾರಿಗಳು, ಸದಸ್ಯರು ಅಭಿಪ್ರಾಯ ಮಂಡಿಸಿದರು. ಸಮಾಜೋತ್ಸವದ ಯಶಸ್ವಿಗಾಗಿ ಕಾಸರಗೋಡು ಜಿಲ್ಲೆಯ ವಿವಿಧೆಡೆ ಉಪಸಂಘಗಳ ವ್ಯಾಪ್ತಿಯಲ್ಲಿ ಸಭೆ ಕರೆದು ಮಹಿಳೆಯರನ್ನು ಒಗ್ಗೂಡಿಸಲು ತೀರ್ಮಾನಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ಸಮಾಜೋತ್ಸವದ ಯಶಸ್ವಿಗಾಗಿ ಹಲವು ಅಭಿಪ್ರಾಯಗಳು ಮೂಡಿಬಂದಿದ್ದು, ಅವುಗಳನ್ನು ಕ್ರೋಢೀಕರಿಸಿ ಮುಂದಿನ ಸಭೆಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.

