HEALTH TIPS

ಸಹೃದಯಿಗಳ ನೆರವು ನಿರೀಕ್ಷೆಯಲ್ಲಿ ಬಡ ಕೃಷಿ ಕುಟುಂಬ

            ಪೆರ್ಲ:ಕಾಟುಕುಕ್ಕೆ ಖಂಡೇರಿಯ ವಿಷ್ಣು ಭಟ್ ಅವರ ಪತ್ನಿ ಜಯಂತಿ ವಿ.ಭಟ್ (51) ಅವರಿಗೆ ಕ್ಯಾನ್ಸರ್ ರೋಗ ಬಾಧಿಸಿದ್ದು ಚಿಕಿತ್ಸೆ ವೆಚ್ಚ ಭರಿಸಲಾಗದೆ ಬಡ ಕುಟುಂಬ ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿದೆ.

               ಪಾಣಾಜೆ ಆರ್ಲಪದವಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾತ್ಕಾಲಿಕ ಶಿಕ್ಷಕಿಯಾಗಿದ್ದ ಜಯಂತಿ ವಿ.ಭಟ್ ಅವರಿಗೆ ಒಂದು ವರ್ಷ ಹಿಂದೆ ಅಜೀರ್ಣ ಹಾಗೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು ಕುಟುಂಬ ವೈದ್ಯರ ಸಲಹೆಯಂತೆ ಪುತ್ತೂರಿನ ಖಾಸಗಿ ಆಸ್ಸತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದರೂ ರೋಗ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.ಆರೋಗ್ಯ ಸಮಸ್ಯೆ ಉಲ್ಬಣಿಸಿದ್ದು ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಸ್ಕಾನಿಂಗ್ ಗೆ ಒಳಗಾದಾಗ ಯಕೃತ್ತು ಮತ್ತು ಕರುಳಿನ ಕ್ಯಾನ್ಸರ್ ಲಕ್ಷಣ ಕಂಡು ಬಂದಿತ್ತು.


                 ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ರಿಪೆÇೀರ್ಟ್ ತೋರಿಸಿದ್ದು ತುರ್ತು ಶಸ್ತ್ರಕ್ರಿಯೆಗೆ ಒಳಗಾಗುವಂತೆ ತಿಳಿಸಿದ್ದರು.ಮಂಗಳೂರು ಎಜೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಯಕೃತ್ತು ಮತ್ತು ಕರುಳಿನ ಶಸ್ತ್ರಕ್ರಿಯೆ ನಡೆಸಲಾಗಿತ್ತು.ಮಂಗಳೂರು ಇನ್ಸ್ಟಿಟ್ಯೂಟ್ ಓಂಕೋಲಜಿಯಲ್ಲಿ(ಎಂಐಒ) ಎರಡು ಹಂತದ ಕೀಮೋಥೆರಪಿಗೆ ಒಳಗಾಗಿದ್ದಾರೆ.ಮಂಗಳೂರು ಕರಂಗಲಪ್ಪಾಡಿಯ ವಿನಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು.ಹೃದಯ, ಗಭರ್Àಕೋಶಕ್ಕೂ ಕ್ಯಾನ್ಸರ್ ಬಾಧಿಸಿದ್ದು ಗರ್ರ್ಭಕೋಶವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸಲಾಗಿದೆ.ಆರೋಗ್ಯ ಸ್ಥಿತಿ ತೃಪ್ತಿಕರವಲ್ಲದ ಹಿನ್ನೆಲೆಯಲ್ಲಿ ಕೀಮೋಥೆರಪಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.ಮೂರು ಹಂತದ ಕೀಮೋಥೆರಪಿಯನ್ನು ಹದಿನೆಂಟು ಹಂತಗಳಲ್ಲಾಗಿ ನಡೆಸಬೇಕಾಗಿದ್ದು ಪ್ರತಿಬಾರಿ 7ರಿಂದ 12 ಸಾವಿರ ತನಕ ಖರ್ಚು ತಗಲುವುದು. ಕೀಮೋಥೆರಪಿ, ಶಸ್ತ್ರಕ್ರಿಯೆ ಸಹಿತ ಈಗಾಗಲೇ ಹತ್ತು ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ.

                                             ಖಂಡೇರಿಯಲ್ಲಿ ಸಮಸ್ಯೆಗಳ ಆಗರ

                 ವಿಷ್ಣು ಭಟ್, ಜಯಂತಿ ದಂಪತಿಯ ಖಂಡೇರಿಯ ಮನೆ ಸುತ್ತಲೂ ಮೂರು ವರ್ಷ ಹಿಂದೆ ಧರೆ ಕುಸಿದು ಮನೆ ಬಿರುಕು ಬಿಟ್ಟಿದೆ.ಈ ಬಾರಿಯ ಮಳೆಗೆ ಮನೆಯ ಪೂರ್ವ ಆಗ್ನೇಯ ಭಾಗದ ಧರೆ ಕುಸಿದಿದೆ.ಮನೆ ಅಡಿಪಾಯ ಅಪಾಯ ಸ್ಥಿತಿಯಲ್ಲಿದೆ.ಮನೆಯಂಗಳದಿಂದ 20 ಅಡಿ ಎತ್ತರದಲ್ಲಿರುವ 11.000ಲೀ.ಸಾಮಥ್ರ್ಯದ ಕುಡಿಯುವ ನೀರು ಸಂಗ್ರಹದ ಟ್ಯಾಂಕ್ ಸುತ್ತಲೂ ಕೆರೆ ಕುಸಿದು ಬೀಳುವ ಹಂತದಲ್ಲಿದೆ.ಪಂಚಾಯಿತಿ, ಗ್ರಾಮ ಕಚೇರಿ ಅಕಾರಿಗಳು ಪರಿಶೀಲನೆ ನಡೆಸಿದ್ದಾರೆ.ಜಯಂತಿ ವಿ.ಭಟ್ ಪ್ರಸ್ತುತ ಸುಳ್ಯದ ಸಂಬಂಧಿಕರ ಮನೆಯಲ್ಲಿದ್ದಾರೆ.ದಂಪತಿಗಳ ಏಕೈಕ ಪುತ್ರಿ ಕೃತಿಕಾ ಪುತ್ತೂರು ವಿವೇಕಾನಂದ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಬಹುಮುಖ ಯಕ್ಷಗಾನ ಕಲಾವಿದೆಯೂ ಆಗಿದ್ದಾಳೆ.ಕೃಷಿ ಆದಾಯ ಮಾತ್ರ ಕುಟುಂಬದ ಏಕೈಕ ವರಮಾನವಾಗಿದೆ.ಮೆಲ್ಜಾತಿ ಬ್ರಾಹ್ಣಣ ಕುಟುಂಬವಾದ ಕಾರಣ ಸರಕಾರಿ ಸವಲತ್ತುಗಳಿಂದ ವಂಚಿತವಾಗಿದೆ.ಮುಂದೇನು ಎಂಬ ಪ್ರಶ್ನೆಯೊಂದಿಗೆ ವಿಷ್ಣು ಭಟ್ ಅವರಿಗೆ ದಿಕ್ಕು ತೋಚದಾಗಿದೆ.ಕುಟುಂಬ ಸಂದಿಗ್ಧ ಸ್ಥಿತಿಯಲ್ಲಿದ್ದು ದಾನಿಗಳ ನೆರವು ಬೇಕಾಗಿದೆ.


                       ದಾನಿಗಳು ಜಯಂತಿ ವಿ.ಭಟ್ ಅವರ ಕೆನರಾ ಬ್ಯಾಂಕ್ ಆರ್ಲಪದವು ಬ್ರಾಂಚ್ , ಖಾತೆ 01762200006074,Éೈಎಫ್ ಎಸ್ ಸಿ ಸಿಎನ್ ಆರ್ ಬಿ 0010176 ಹಣ ವರ್ಗಾಯಿಸಬಹುದು. ಮೊಬೈಲ್ 9731435122


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries