ಕೊಚ್ಚಿ: ರಿಕ್ಷಾದಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯೋರ್ವನನ್ನು ಅಬಕಾರಿ ಅಧಿಕಾರಿಗಳು ಕೇರಳದ ಚಿರಕ್ಕಾಡು ಎಂಬಲ್ಲಿ ಬಂಧಿಸಿದ್ದಾರೆ.
0
samarasasudhi
ಡಿಸೆಂಬರ್ 13, 2021
ಕೊಚ್ಚಿ: ರಿಕ್ಷಾದಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯೋರ್ವನನ್ನು ಅಬಕಾರಿ ಅಧಿಕಾರಿಗಳು ಕೇರಳದ ಚಿರಕ್ಕಾಡು ಎಂಬಲ್ಲಿ ಬಂಧಿಸಿದ್ದಾರೆ.
ಖಚಿತ ಸುಳಿವಿನ ಆಧಾರದ ಮೇಲೆ ಅಧಿಕಾರಿಗಳು ಧಾಳಿ ನಡೆಸಿದ್ದರು.
ಈ ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಮದ್ಯ ಹಾಗೂ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದರೆ ಪೊಲೀಸರ ಗಮನಕ್ಕೆ ತರಬೇಕಾಗಿ ಪ್ರಕಟಣೆ ಹೊರಡಿಸಲಾಗಿತ್ತು. ಅಲ್ಲದೆ ನಿರ್ದಿಷ್ಟ ಫೋನ್ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಬೇಕಾಗಿ ಮನವಿ ಮಾಡಿಕೊಂಡಿತ್ತು.
ಪೊಲೀಸರ ಪ್ರಕಟಣೆ ನಂತರ ಸಾರ್ವಜನಿಕರಿಂದ ಒಳ್ಳೆಯ ಸ್ಪಂದನೆ ಹಾಗೂ ಸಹಕಾರ ಲಭ್ಯವಾಗುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.