ಬದಿಯಡ್ಕ: ನಮ್ಮ ದೇಶ ರಕ್ಷಣೆಗಾಗಿ ಯೋಧರಿರುವುದರಿಂದ ನಾವಿಂದು ನೆಮ್ಮದಿಯಿಂದ ಜೀವನವನ್ನು ನಡೆಸುತ್ತೇವೆ. ಅವರ ಋಣವನ್ನು ತೀರಿಸಲು ಅಸಾಧ್ಯ. ಅವರು ಮರಣ ಹೊಂದಿದಾಗ ಅವರ ಬಗ್ಗೆ ನೆನೆಪಿಸುವ ಆರೋಗ್ಯಕರ ಮನಸ್ಸು ನಮಗಿರಬೇಕು ಎಂದು ಎಡನೀರು ಶ್ರೀ ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಕರೆ ನೀಡಿದರು.
ಎಡನೀರು ಶ್ರೀ ಮಠದ ವತಿಯಿಂದ ಇತ್ತೀಚೆಗೆ ಕೂನೂರು ಅಪಘಾತದಲ್ಲಿ ವೀರ ಮರಣವನ್ನಪ್ಪಿದ ಸಿಡಿಎಸ್ ಬಿಪಿನ್ ರಾವತ್ ಹಾಗೂ ಸೈನಿಕರಿಗೆ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಡನೀರು ಶ್ರೀ ಗಳು ಬಿಪಿನ್ ರಾವತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಅರ್ಪಿಸಿದರು. ವಾರ್ಡ್ ಸದಸ್ಯ ಸಲೀಮ್ ಎಡನೀರು, ಎಡನೀರು ಶ್ರೀ ಮಠದ ಪಬಂಧಕ ರಾಜೇಂದ್ರ ಕಲ್ಲೂರಾಯ, ಮಾಧವ ಹೇರಳ, ಶಾಂತಕುಮಾರಿ ಟೀಚರ್,ಸತೀಶ್ ಎಡನೀರು ಮೊದಲಾದವರು ನುಡಿ ನಮನವನ್ನು ಅರ್ಪಿಸಿದರು. ಜಿಲ್ಲಾ ನಿವೃತ್ತ ವಿದ್ಯಾಧಿಕಾರಿ ವೇಣುಗೋಪಾಲ ಎಡನೀರು ಸ್ವಾಗತಿಸಿ, ವಂದಿಸಿದರು.




