HEALTH TIPS

ಸಮಾಜದ ಜೊತೆಗೆ ದೇಶ ಕಟ್ಟುವ ಕೈಂಕರ್ಯದಲ್ಲಿ ಯುವಕರು ತೊಡಗಬೇಕು : ಉದ್ಯಮಿ ಲಕ್ಷ್ಮಣ ಬೀರಂತಬೈಲ್

  

               ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಯುವ ಸಂಘ ಕಾಸರಗೋಡು ಇದರ ಆಶ್ರಯದಲ್ಲಿ ಕೋಸ್ಮೋಸ್ ಇಂಡೋರ್ ಸ್ಟೇಡಿಯಂನಲ್ಲಿ  ಕಾಸರಗೋಡು ಜಿಲ್ಲಾ ಮಟ್ಟದ ಪುರುಷ-ಮಹಿಳಾ ಶಟಲ್ ಬ್ಯಾಡ್‍ಮಿಂಟನ್ ಪಂದ್ಯಾಟ ಜರಗಿತು. 

                 ಬೀರಂತಬೈಲ್‍ನ ಶ್ರೀ ಭಿಕ್ಷು ಲಕ್ಷಣಾನಂದ ಸ್ಮಾರಕ ಮಂದಿರದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಲಕ್ಷ್ಮಣ ಬೀರಂತಬೈಲ್ ಅವರು ಮಾತನಾಡಿ ಸಮಾಜದ ಜೊತೆಗೆ ದೇಶ ಕಟ್ಟುವ ಕೈಂಕರ್ಯದಲ್ಲಿ ಯುವಕರು ಮುಂದಾಗಬೇಕು. ಯುವಕರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕೆಂದು ಕರೆ ನೀಡಿದರು. 

                  ವಿಜೇತರಿಗೆ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು, ಕೋಶಾಧಿಕಾರಿ ಸತೀಶ್ ಮಾಸ್ತರ್ ಕೂಡ್ಲು, ಗೌರವ ಕಾರ್ಯದರ್ಶಿ ಬಿ.ಪಿ.ವೆಂಕಟ್ರಮಣ, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ವಾಮನ ರಾವ್ ಬೇಕಲ್, ಬಾಲಚಂದ್ರ ಕುಂಬಳೆ, ಮಹಿಳಾ ಸಂಘದ ಕಾರ್ಯದರ್ಶಿ ಸುಕನ್ಯಾ ಹರೀಶ್, ಪ್ರೇಮ್ ಕಿಶೋರ್ ಕುಂಬಳೆ ಮೊದಲಾದವರು ಬಹುಮಾನ ವಿತರಿಸಿದರು. ಮಹಿಳಾ ಸಂಘದ ಗೌರವ ಅಧ್ಯಕ್ಷೆ ಆಶಾ ರಾಧಾಕೃಷ್ಣ, ಪ್ರದೀಪ್ ಬೇಕಲ್  ಶುಭಹಾರೈಸಿದರು.  

                   ಯುವ ಸಂಘದ ಅಧ್ಯಕ್ಷ ಭರತೇಶ್ ಸ್ವಾಗತಿಸಿದರು. ಶರಣ್ಯ ವಿ.ಕೆ.ಕೋಟೆಕಣಿ ಪ್ರಾರ್ಥನೆ ಹಾಡಿದರು. ಲೋಕೇಶ್ ಅಣಂಗೂರು ಕಾರ್ಯಕ್ರಮ ನಿರೂಪಿಸಿದರು. ಮೋದಕ್ ರಾಜ್ ವಂದಿಸಿದರು. 

                   ಉದ್ಘಾಟನೆ : ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು ಅವರು ಶಿಕ್ಷಣ-ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳು. ಓದಿನಿಂದ ಬೌದ್ಧಿಕ ಜ್ಞಾನ, ಕ್ರೀಡೆಯಿಂದ ಆರೋಗ್ಯ ಹಾಗು ಮನಸ್ಸುಗಳಿಗೆ ಮುದ, ಉಲ್ಲಾಸ ಲಭಿಸುತ್ತದೆ. ದೈಹಿಕ ಬೆಳವಣಿಗೆಗೆ ಪೂರಕ, ರಕ್ತ ಚಲನೆಗೆ ಸಹಕಾರಿ ಮತ್ತು ಮೆದುಳಿನ ಬೆಳವಣಿಗೆಗೆ ಪ್ರಯೋಜನಕಾರಿ ಎಂದರು. ನಿವೃತ್ತ ಅಧ್ಯಾಪಕಿ ಉಷಾ ಟೀಚರ್ ಪಾರೆಕಡವು ಶುಭಹಾರೈಸಿದರು. 

                   ಕಾಸರಗೋಡು ಉಪಸಂಘದ ಅಧ್ಯಕ್ಷ ವಿದ್ಯಾನಂದ ಹೂಡೆ, ಚಂದ್ರಕಾಂತ್ ನಾಗರಕಟ್ಟೆ, ಲೋಕೇಶ್ ಅಣಂಗೂರು, ಭರತೇಶ್ ಮೊದಲಾದವರು ಉಪಸ್ಥಿತರಿದ್ದರು. ಈ  ಸಂದರ್ಭದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸಂಯುಕ್ತ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸಹೋದ್ಯೋಗಿಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries