HEALTH TIPS

ಚಳವಳಿಗಳು ನಿಂತಾಗ ಬೆಳವಣಿಗೆ ಕುಂಠಿತಗೊಳ್ಳುತ್ತದೆ: ಪ್ರೊ.ಸುಕನ್ಯಾ ಮಾರುತಿ: ರಂಗ ಕುಟೀರದ ರಂಗೋತ್ಸವದಲ್ಲಿ ಅಭಿಮತ

                                                 

                 ಕಾಸರಗೋಡು: ಕನ್ನಡ ನಾಡು ನುಡಿ ಈವರೆಗೆ ಸಾಗಿಬಂದ ಹಾದಿಗಳು ಚಳವಳಿಗಳಂತಹ ಕ್ರಿಯಾತ್ಮಕ ಚಟುವಟಿಕೆಗಳಿಂದಾಗಿದೆ. ಚಳವಳಿಗಳು ನಿಂತುಹೋದಾಗ ಬೆಳವಣಿಗೆ ಕಳೆದುಕೊಂಡು ಜಡತ್ವ ಆಪೋಶನಗೈಯ್ಯುತ್ತದೆ. ಈ ಹಿನ್ನೆಲೆಯಲ್ಲಿ ನಿತ್ಯ-ನಿರಂತರ ಚಟುವಟಿಕೆಗಳು ಭಾಷೆ, ಸಂಸ್ಕøತಿಯನ್ನು ಬಲಪಡಿಸುತ್ತದೆ ಎಂದು ಹಿರಿಯ ಸಾಹಿತಿ, ಪ್ರಾಧ್ಯಾಪಕಿ ಪ್ರೊ. ಸುಕನ್ಯ ಮಾರುತಿ ತಿಳಿಸಿದರು.

         ಪಾರೆಕಟ್ಟೆಯ ರಂಗ ಕುಟೀರ ಕಾಸರಗೋಡು ನೇತೃತ್ವದಲ್ಲಿ ಭಾನುವಾರ ಅಪರಾಹ್ನ ಕಾಸರಗೋಡು ಮುನ್ಸಿಪಲ್ ಕಾನ್ಪರೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಂಗೋತ್ಸವ ಹಾಗೂ ದಿ. ಡಾ.ಸಿದ್ದಲಿಂಗಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


           ಕರ್ನಾಟಕದಲ್ಲಿ ನಡೆದ ಗೋಕಾಕ್ ಚಳವಳಿಯ ಮೂಲಕ ಸಮಸ್ತ ಕರ್ನಾಟಕ ಜಾಗೃತ ಸಮಾಜವಾಗಿ ಮಾರ್ಪಟ್ಟಿತು. ಅಂತಹ ಚಳವಳಿಯಿಂದ ಜನರನ್ನು ಒಗ್ಗೂಡಿಸುವ ಮೂಲಕ ಏಕಾತ್ಮಕತೆಯ ಸಂದೇಶ ಸಾರಲು ಕಾರಣವಾಗಿ ನ್ಯಾಯದೊರಕಲು ಕಾರಣವಾಯಿತು. ಗಡಿನಾಡು ಕಾಸರಗೋಡಲ್ಲಿ ಅಂತಹ ಚಳವಳಿ ರೂಪುಗೊಳ್ಳಬೇಕು ಎಂದು ಅವರು ತಿಳಿಸಿದರು. ರಂಗ ಕುಟೀರದ ದಣಿವರಿಯದ ನಿರಂತರ ಚಟುವಟಿಕೆಗಳು ಬಹುಭಾಷೆ, ಸಂಸ್ಕøತಿಯ ನೆಲೆಗಟ್ಟಿನಲ್ಲಿ ಸಾಕಷ್ಟು ಗಮನ ಸೆಳೆದಿದೆ. ಡಾ.ಸಿದ್ದಲಿಂಗಯ್ಯ ಅವರಿಗೆ ಕಾಸರಗೋಡಿನ ಬಗ್ಗೆ ಇದ್ದ ಕಾಳಜಿ ಮತ್ತು ಅಭಿಮಾನದ ಕಾರಣ ಹಲವಾರು ಯೋಜನೆಗಳನ್ನು ಇಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗಿತ್ತು ಎಂದು ಪ್ರೊ.ಸುಕನ್ಯ ಮಾರುತಿ ನೆನಪಿಸಿದರು.

            ರಂಗ ಕುಟೀರದ ನಿರ್ದೇಶಕ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಹಿತ್ಯ-ಸಾಂಸ್ಕøತಿಕ ನೆಲೆಗಟ್ಟಿನ ಮೂಲಕ ರೂಪುಗೊಳ್ಳುವ ಅಭಿಮಾನ ನಮ್ಮನ್ನು ಗಟ್ಟಿಗೊಳಿಸುತ್ತದೆ ಎoದರು.   


        ಹಿರಿಯ ರಂಗನಟ ದೇವರಾಜ್ ಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ಕಲೆ-ಕಲಾವಿದರನ್ನು ಪರಿಪೋಶಿಸುವ ಸಮಾಜ ಕ್ಲೇಶ ರಹಿತವಾಗಿ ಸುದೃಢವಾಗಿ ಬೆಳೆದು ಇತರೆಡೆಗಳಿಗೂ ಬೆಳಕು ನೀಡುತ್ತದೆ. ಗಡಿನಾಡಿನ ವಿವಿಧತೆಯಲ್ಲಿಯ ಏಕತೆ, ವಿಭಿನ್ನ ಆಯಾಮಗಳಿಂದ ನಾಡುನುಡಿಗೆ ನೀಡಿದ ಕೊಡುಗೆ ಅತ್ಯಪೂರ್ವವಾದುದು. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆಚರಣೆ, ನಂಬಿಕೆ ಆಹಾರ ಸಂಸ್ಕøತಿಯನ್ನು ಅನುಸರಿಸುವ ಹಕ್ಕು ನಮ್ಮ ದೇಶದಲ್ಲಿದೆ. ಬಹುಜನರ ಆಹಾರ ಸಂಸ್ಕøತಿಯನ್ನು ನಿಷೇಧೀಸುವುದು ಅಸಾಂವಿಧಾನಿಕವಾಗಿದ್ದು, ಇದು ಸಾಂಸ್ಕøತಿಕತೆಯ  ಅರಿವಿನ ಕೊರತೆಯ ದ್ಯೋತಕ ಎಂದರು.

          ಅಗಲಿದ ಕವಿ ದಿ.ಡಾ.ಸಿದ್ದಲಿಂಗಯ್ಯ ಅವರ ಧರ್ಮಪತ್ನಿ ರಮಾದೇವಿ ಸಿದ್ದಲಿಂಗಯ್ಯ ಅವರು ಉಪಸ್ಥಿತರಿದ್ದು ಮಾತನಾಡಿ, ಚಳವಳಿಗಳಿಗೇ ಬದುಕನ್ನು ಮೀಸಲಿರಿಸಿದ್ದ ಡಾ.ಸಿದ್ದಲಿಂಗಯ್ಯ ಅವರು ಕಾಸರಗೋಡಿನ ಬಗ್ಗೆ ಕಳಕಳಿ ಹೊಂದಿದ್ದರು. ಧಮನಿತರ ಬಗೆಗೆ ಅವÀರ ನಿರಂತರ ಹೋರಾಟ ಭಾಷಾ ಧಮನಿತರ ಬಗೆಗೂ ತುಡಿಯುತ್ತಿತ್ತು ಎಂದರು.

             ಸಮಾರಂಭದಲ್ಲಿ ದಿ.ಡಾ.ಸಿದ್ದಲಿಂಗಯ್ಯ ಸ್ಮಾರಕ ಪ್ರಶಸ್ತಿಯನ್ನು ಚಲನಚಿತ್ರ ಹಿನ್ನೆಲೆ ಗಾಯಕ ರಮೇಶ್ ಚಂದ್ರ ಅವರಿಗೆ ಪ್ರದಾನ ಮಾಡಲಾಯಿತು. ಉದುಮ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಹಾರೈಕೆಗಳ ಮಾತನ್ನಾಡಿದ ಶಾಸಕರು ಕಾಸರಗೋಡಿನಂತಹ ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಇಂದು ಕರ್ನಾಟಕದಾತ್ಯಂತ ಜನಜನಿತ ಗಾಯಕರಾಗಿರುವ ರಮೇಶ್ ಚಂದ್ರ ಅವರ ಸಾಧನೆ ಸ್ತುತ್ಯರ್ಹ ಮತ್ತು ಅನುಸರಣೀಯ. ಡಾ.ಸಿದ್ದಲಿಂಗಯ್ಯ ಅವರೊಂದಿಗಿನ ಸಂಪರ್ಕ ಅವಿಸ್ಮರಣೀಯ ಎಂದು ನೆನಪಿಸಿದರು. 

             ಮಂಜೇಶ್ವರ ಗ್ರಾ.ಪಂ.ಅ|ಧ್ಯಕ್ಷೆ, ಸವಾಕ್ ಮಂಜೇಶ್ವರ ವಲಯಾಧ್ಯಕ್ಷೆ ಜೀನ್ ಲವೀನಾ ಮೊಂತೇರೋ ಉಪಸ್ಥಿತರಿದ್ದು ಶುಭಹಾರೈಸಿದರು. ರಂಗ ಕುಟೀರದ ಸಂಚಾಲಕಿ ನಶ್ಮಿತಾ ಕಮಲೇಶ್ ಸ್ವಾಗತಿಸಿ, ವಂದಿಸಿದರು. ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ತಂಡಗಳಿಂದ ನೃತ್ಯ ವೈವಿಧ್ಯ, ಕೂಚುಪುಡಿ ನೃತ್ಯ, ಸುಗಮ ಸಂಗೀತ ಹಾಗೂ ರಂಗ ಕುಟೀರದ ಕಲಾವಿದರಿಂದ "ನಾ ಸತ್ತಾಗ" ಕನ್ನಡ ರಂಗ ನಾಟಕದ ಪ್ರದಶರ್Àನ ನಡೆಯಿತು. ಕವಿ ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರು ಬರೆದ ರಾಮ ಕಂಡ ಭೀಮ ಕಥನ ಕಾವ್ಯವನ್ನು ಪ್ರೊ.ಸುಕನ್ಯಾ ಮಾರುತಿ ಈ ಸಂದರ್ಭ ಬಿಡುಗಡೆಗೊಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries