ಕಾಸರಗೋಡು: ಅಂಚೆ ಇಲಾಖೆಯ ಡಿವಿಶನಲ್ ಮಟ್ಟದ ಡಾಕ್ ಅದಾಲತ್ ಕಾಸರಗೋಡು ವಿಭಾಗೀಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಡಿ. 28ರಂದು ಮಧ್ಯಾಹ್ನ 2ಗಂಟೆಗೆ ಜರುಗಲಿದೆ. ಲೆಟರ್ ಪೋಸ್ಟ್, ಮನಿ ಆರ್ಡರ್, ಪಾರ್ಸೆಲ್, ಸ್ಪೀಡ್ ಪೋಸ್ಟ್, ಸೇವಿಂಗ್ ಬ್ಯಾಂಕ್ ಮುಂತಾದ ವಿಷಯಗಳ ಬಗ್ಗೆ ಸಾರ್ವಜನಿಕರಿಗಿರುವ ದೂರುಗಳನ್ನು ಅದಾಲತ್‍ನಲ್ಲಿ ಅಂಚೆ ಅಧೀಕ್ಷಕರಿಗೆ ತಿಳಿಸಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ 04994 230885, 230746 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




