ಕಾಸರಗೋಡು: ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ ಅಂಗವಾಗಿ ಕೆಎಸ್‍ಇಬಿ ವತಿಯಿಂದ ಸಾರ್ವಜನಿಕ ರ್ಯಾಲಿ ಡಿ. 14ರಂದು ಕಾಸರಗೋಡಿನಲ್ಲಿ ನಡೆಯಲಿದೆ. ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಿಂದ ನಗರಸಭಾಂಗಣ ವರೆಗೆ ನಡೆಯಲಿರುವ ರ್ಯಾಲಿಗೆ ಬೆಳಗ್ಗೆ 10ಕ್ಕೆ ಶಾಸಕ ಎನ್.ಎ ನೆಲ್ಲಿಕುನ್ನು ಚಾಲನೆ ನೀಡುವರು.
ನಗರಸಭಾಂಗಣದ ವನಿತಾಸಭಾಂಗಣದಲ್ಲಿ 11ಕ್ಕೆ ನಡೆಯುವ ಸಮಾರಂಭದಲ್ಲಿ ಕಾಸರಗೋಡು ನಗರಸಭಾ ಅಧ್ಯಕ್ಷ ವಿ.ಎಂ ಮುನೀರ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಸಾರ್ವಜನಿಕರಿಗಾಗಿ ಇಂಧನ ಸಂರಕ್ಷಣೆ ಬಗ್ಗೆ ಜಾಗೃತಿ ತರಗತಿ ನಡೆಯುವುದು. ಜಿಲ್ಲಾ ಪ್ರೋಜೆಕ್ಟ್ ಮ್ಯಾನೇಜ್‍ಮೆಂಟ್ ಯೂನಿಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೆ.ಟಿ ಕರುಣಾಕರನ್ ವಿಷಯ ಮಂಡಿಸುವರು.




