HEALTH TIPS

ಕಂಗಳ ಅಂದಕ್ಕೆ ಮನೆಯಲ್ಲಿಯೇ ತಯಾರಿಸಿ ಈ ನೈಸರ್ಗಿಕ ಕಾಡಿಗೆ

         ಕಾಜಲ್ ನಮ್ಮ ಕಣ್ಣುಗಳನ್ನು ಸುಂದರವಾಗಿಸುವುದಲ್ಲದೇ, ಮುಖಕ್ಕೆ ಒಂದು ಸಂಪೂರ್ಣ ನೋಟವನ್ನು ನೀಡುತ್ತದೆ. ಕಣ್ಣುಗಳ ಆಕಾರ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಕಾಜಲ್ ಅಥವಾ ಕಾಡಿಗೆ ಹಚ್ಚುವುದರಿಂದ ಕಣ್ಣುಗಳು ದೊಡ್ಡದಾಗಿ ಮತ್ತು ಸುಂದರವಾಗಿ ಕಾಣುತ್ತವೆ. ಆದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾಜಲ್ ಅನ್ನು ಪ್ರತಿದಿನ ಹಚ್ಚುವುದರಿಂದ ಕಣ್ಣುಗಳಿಗೆ ಹಲವಾರು ರೀತಿಯ ಹಾನಿ ಉಂಟಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?..

       ಹೌದು, ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ಮಸ್ಕರಾವು ರಾಸಾಯನಿಕಗಳಿಂದ ಕೂಡಿದ್ದು, ಇದರಿಂದಾಗಿ ಕಣ್ಣುಗಳಿಗೆ ಅಲರ್ಜಿ ಉಂಟಾಗುತ್ತವೆ. ಅಷ್ಟೇ ಅಲ್ಲ, ಇದನ್ನು ಪ್ರತಿದಿನ ಹಚ್ಚಿದರೆ ಕಾರ್ನಿಯಲ್ ಅಲ್ಸರ್ ಮತ್ತು ಡ್ರೈ ಕಣ್ಣುಗಳಿಗೆ ಕಾರಣವಾಗಬಹುದು. ಜೊತೆಗೆ ಕಣ್ಣುಗಳ ಒಳಗೆ ಊತವೂ ಆಗಬಹುದು.

          ಆದ್ದರಿಂದ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಲು ಕಾಜಲ್ ಹಚ್ಚಲು ಬಯಸುವುದಾದರೆ, ಮನೆಯಲ್ಲಿ ತಯಾರಿಸಿದ ಕಾಜಲ್ ಅನ್ನು ಬಳಸಿ. ಮನೆಯಲ್ಲಿ ತಯಾರಿಸಿದ ಕಾಜಲ್ ನೈಸರ್ಗಿಕವಾಗಿದ್ದು, ಯಾವುದೇ ರೀತಿಯಲ್ಲಿ ಕಣ್ಣುಗಳಿಗೆ ಹಾನಿ ಮಾಡುವುದಿಲ್ಲ. ಮನೆಯಲ್ಲಿ ಕಾಜಲ್ ಅನ್ನು ಹೇಗೆ ತಯಾರಿಸಬೇಕೆಂಬುದನ್ನು ಇಲ್ಲಿ ನೋಡೋಣ.

            ರಾಸಾಯನಿಕ ಮುಕ್ತ ಕಾಜಲ್ ಅಥವಾ ಕಾಡಿಗೆಯನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

           

ವಿಧಾನ: 1

ಕಾಜಲ್ ತಯಾರಿಸಲು ಬೇಕಾಗುವ ಪದಾರ್ಥಗಳು:

ಒಂದು ತಟ್ಟೆ

ಒಂದು ದೊಡ್ಡ ಚಮಚ

ತುಪ್ಪ

ಮಣ್ಣಿನ ದೀಪ

ಬತ್ತಿ

ಕೊಬ್ಬರಿ ಎಣ್ಣೆ

                    ಕಾಜಲ್ ಮಾಡುವುದು ಹೇಗೆ?:

ಕಾಜಲ್ ಮಾಡಲು, ಮೊದಲು ತುಪ್ಪವನ್ನು ಹಾಕಿ, ದೀಪವನ್ನು ಬೆಳಗಿಸಿ.

ಅದನ್ನು ಒಂದು ತಗ್ಗು ಪ್ರದೇಶದಲ್ಲಿಟ್ಟು ಅದರ ಮೇಲೆ ಒಂದು ಬಟ್ಟಲನ್ನು ಮಗುಚಿ ಹಾಕಿ. ನೆನಪಿಡಿ, ಬಟ್ಟಲು ದೀಪವನ್ನ ಸಂಪೂರ್ಣವಾಗಿ ಮುಚ್ಚಬಾರದು, ಜೊತೆಗೆ ದೀಪದಿಂದ ಹೆಚ್ಚು ದೂರವೂ ಇರಬಾರದು.

20 ರಿಂದ 30 ನಿಮಿಷಗಳ ಕಾಲ ದೀಪ ಉರಿದ ನಂತರ, ತಟ್ಟೆಯಲ್ಲಿ ಮಸಿ ಬಂದಿರುತ್ತದೆ.

ಈ ಮಸಿಯನ್ನು ಚಮಚದ ಸಹಾಯದಿಂದ ಕೆರೆದು, ಪೆಟ್ಟಿಗೆಗೆ ತುಂಬಿ.

ಈ ಮಸಿಗೆ ಒಂದು ಹನಿ ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಕಲಸಿ, ನಿಮ್ಮ ದೇಸಿ ಕಾಜಲ್ ರೆಡಿ.

ಈ ಕಾಜಲ್ ನಿಮ್ಮ ಕಣ್ಣಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ.

            

 ವಿಧಾನ: 2

ಬೇಕಾಗುವ ಪದಾರ್ಥಗಳು:

ಬಾದಾಮಿ

ಬತ್ತಿ

ಹರಳೆಣ್ಣೆ

ತುಪ್ಪ

                               ತಯಾರಿಸುವ ವಿಧಾನ:

ಮೊದಲು ಒಂದು ದೀಪದ ಕಂಬವನ್ನು ತೆಗೆದುಕೊಂಡು ಇದಕ್ಕೆ ಹರಳೆಣ್ಣೆ ಹಾಕಬೇಕು. ಹತ್ತಿಯ ಬತ್ತಿಯ ಸಹಾಯದಿಂದ ದೀಪವನ್ನು ಹೊತ್ತಿಸಿ, ಇದರ ಶಾಖದಲ್ಲಿ ಬಾದಾಮಿಯನ್ನು ಇಕ್ಕಳದ ಸಹಾಯದಿಂದ ಸಂಪೂರ್ಣವಾಗಿ ಸುಡಬೇಕು. ಇದು ಸುಟ್ಟು ಕರಕಲು ಆದ ಬಳಿಕ, ತಣ್ಣಗಾಗಲು ಬಿಡಬೇಕು. ಆನಂತರ, ಇದನ್ನು ಚೆನ್ನಾಗಿ ನುಣ್ಣಗೆ ಪುಡಿ ಮಾಡಿ, ಜರಡಿ ಮಾಡಿಕೊಂಡು, ಇದಕ್ಕೆ ಸ್ವಲ್ಪ ತುಪ್ಪ ಬೆರೆಸಿ, ಕಲೆಸಿ, ಆನಂತರ ಒಂದು ಡಬ್ಬಿಯಲ್ಲಿ ತೆಗೆದಿಟ್ಟುಕೊಂಡರೆ, ಎರಡರಿಂದ ಮೂರು ತಿಂಗಳವರೆಗೆ ಇದನ್ನು ಉಪಯೋಗಿಸಬಹುದು.

        

ಕಾಡಿಗೆಯ ಉಪಯೋಗ:

  • ಹರಳೆಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ ಕಣ್ಣಿಗೆ ತುಂಬಾ ತಂಪಾಗಿರುವುದರಿಂದ ಇದನ್ನು ಬಳಸಿದರೆ ಉಪಯುಕ್ತವಾಗಿರುತ್ತದೆ.
  • ಕಣ್ಣಿಗೆ ಉಪಯುಕ್ತವಾದ ಕಾಡಿಗೆಯನ್ನು ಪ್ರತಿನಿತ್ಯ ಬಳಸುವುದರಿಮ್ದ ನಿದ್ದೆ ಚೆನ್ನಾಗಿ ಬರುತ್ತದೆ.
  • ಹರಳೆಣ್ಣೆ, ಬೆಣ್ಣೆಯನ್ನು ಬಳಸಿರುವುದರಿಂದ ಕಣ್ಣಿನ ಉರಿ ಶಮನವಾಗುತ್ತದೆ.
  • ಬಾದಾಮಿ ಪೌಷ್ಠಿಕಾಂಶದಿಂದ ಕೂಡಿದ್ದು ಇದರ ಬಳಕೆ ಕಣ್ಣಿಗೆ ಉತ್ತಮ.
  • ಕಾಡಿಗೆ ಬಳಸುವಾಗ ಈ ವಿಚಾರ ನೆನಪಿಡಿ:

    • ಅಂಗಡಿಗಳಲ್ಲಿ ದೊರಕುವ ಕಾಡಿಗೆಗಳನ್ನು ಕೊಳ್ಳುವುದಕ್ಕಿಂತಲೂ, ಮನೆಗಳಲ್ಲೇ ತಯಾರಿಸಿದ ಕಾಡಿಗೆಗಳನ್ನು ಬಳಸುವುದು ಉತ್ತಮ.
    • ಕಾಡಿಗೆಯನ್ನು ಬಳಸಿದ ತಕ್ಷಣ ಕಣ್ಣುಗಳನ್ನು ಕೈಯಿಂದ ಉಜ್ಜಬಾರದು. ಇದರಿಂದ ಮೇಕಪ್ ಹಾಳಾಗುತ್ತದೆ.
    • ಮುಖದ ಮೇಕಪ್ ಎಲ್ಲಾ ಮುಗಿದ ನಂತರ ಕಾಡಿಗೆ ಬಳಸುವುದು ಉತ್ತಮ.
    • ಕನ್ನಡಕವನ್ನು ಬಳಸುವವರು ಗಾಢವಾದ ಕಾಡಿಗೆಯನ್ನು ಜಾಸ್ತಿ ಹಚ್ಚಿಕೊಳ್ಳಬಾರದು.
    • ಕಾಡಿಗೆಯನ್ನು ಕೈಯಿಂದ ಹಚ್ಚುವಾಗ, ಕೈಯನ್ನು ಶುದ್ದವಾಗಿಟ್ಟುಕೊಳ್ಳಬೇಕು.

    

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries