ತಿರುವನಂತಪುರ: ರಾಜ್ಯದಲ್ಲಿ ನಿನ್ನೆ 54 ಮಂದಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ತಿರುವನಂತಪುರ 8, ಎರ್ನಾಕುಳಂ, ತ್ರಿಶೂರ್, ಮಲಪ್ಪುರಂ, ಕಣ್ಣೂರು 6, ಕೊಲ್ಲಂ, ಕೊಟ್ಟಾಯಂ 5, ಆಲಪ್ಪುಳ 4, ಕೋಝಿಕ್ಕೋಡ್ 3, ಪಾಲಕ್ಕಾಡ್ 2, ವಯನಾಡ್ ಮತ್ತು ಕಾಸರಗೋಡು ತಲಾ 1 ಎಂಬಂತೆ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿ ಒಟ್ಟು 761 ಮಂದಿಗೆ ಒಮಿಕ್ರಾನ್ ದೃಢಪಟ್ಟಿದೆ ಎಂದು ಸಚಿವರು ತಿಳಿಸಿದರು. 518 ಕಡಿಮೆ ಅಪಾಯದ ದೇಶಗಳಿಂದ ಮತ್ತು ಒಟ್ಟು 115 ಹೆಚ್ಚಿನ ಅಪಾಯದ ದೇಶಗಳಿಂದ ಬಂದವರು. ಸಂಪರ್ಕದ ಮೂಲಕ ಒಟ್ಟು 99 ಜನರಿಗೆ ಸೋಂಕು ತಗುಲಿದೆ. ಬೇರೆ ರಾಜ್ಯದವರು 29 ಮಂದಿ ಇದ್ದಾರೆ.
ನಿನ್ನೆ ಸೋಂಕು ಪತ್ತೆಯಾದವರಲ್ಲಿ ಒಬ್ಬರು ಯುಎಇಯಿಂದ ಆಗಮಿಸಿದ ಕರ್ನಾಟಕದವರು. 35 ಮಂದಿ ಕಡಿಮೆ ಅಪಾಯದ ದೇಶಗಳಿಂದ ಮತ್ತು 7 ಹೆಚ್ಚಿನ ಅಪಾಯದ ದೇಶಗಳಿಂದ ಬಂದವರು. ಒಬ್ಬರು ಬೇರೆ ರಾಜ್ಯದವರು. 11 ಜನರ ಸಂಪರ್ಕದ ಮೂಲಕ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದರು. ತಿರುವನಂತಪುರ 5, ಕೊಲ್ಲಂ 3, ಆಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಳಂ ತಲಾ ಒಬ್ಬರು ಸಂಪರ್ಕದಿಂದ ಸೋಂಕಿಗೊಳಗಾಗಿದ್ದಾರೆ.

