?
ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಹಠಾತ್ ರಜೆಮೇಲೆ ತೆರಳಿದ್ದಾರೆ. ನಾಳೆಯಿಂದ ಫೆಬ್ರವರಿ 1 ರವರೆಗೆ ರಜೆಯಲ್ಲಿರುವರು ಎಂದು ತಿಳಿದುಬಂದಿದೆ. ವೈಯಕ್ತಿಕ ಕಾರಣಕ್ಕಾಗಿ ರಜೆ ಮೇಲೆ ತೆರ|ಳುತ್ತಿರುವುದಾಗಿ ಜಿಲ್ಲಾಧಿಕಾರಿ ವಿವರಣೆ ನೀಡಿರುವರು. ಎಡಿಎಂ ಜವಾಬ್ದಾರಿ ವಹಿಸಲಾಗಿದೆ. ಸಿಪಿಎಂ ಜಿಲ್ಲಾ ಸಮಾವೇಶದ ಸುತ್ತ ವಿವಾದದ ನಡುವೆ ರಜೆ ಮೇಲೆ ತೆರಳಿರುವುದು ಹಲವು ಸಂಶಯಗಳಿಗೂ ಕಾರಣವಾಗಿದೆ.
ಸಾರ್ವಜನಿಕ ಕಾರ್ಯಕ್ರಮಗಳ ಮೇಲಿನ ನಿಷೇಧವನ್ನು ಹಿಂಪಡೆದಿರುವ ಕಾಸರಗೋಡು ಜಿಲ್ಲಾಧಿಕಾರಿಗಳ ಕ್ರಮ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಜಿಲ್ಲಾಧಿಕಾರಿ ಹೈಕೋರ್ಟ್ ನಿಂದ ಟೀಕೆ ಎದುರಿಸಿದ್ದರು. ನಂತರ ರಜೆಯ ಮೇಲೆ ತೆರಳಿದರು. ನಿರ್ಬಂಧಗಳನ್ನು ಹಿಂಪಡೆದಿರುವ ಜಿಲ್ಲಾಧಿಕಾರಿಗಳ ಆದೇಶ ಸ್ಪಷ್ಟವಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ.
ನಿನ್ನೆ ನಡೆದ ಕೊರೋನಾ ಪರಿಶೀಲನಾ ಸಭೆಯ ನಂತರ ರಾಜಕೀಯ ಪಕ್ಷಗಳ ಸಾರ್ವಜನಿಕ ಸಭೆಯನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ನಿಷೇಧಿಸಿದ್ದಾರೆ. ಆದರೆ ಎರಡು ಗಂಟೆಯೊಳಗೆ ನಿರ್ಧಾರವನ್ನು ಹಿಂತೆಗೆದುಕೊಂಡ ಅವರು ಕೆಲವು ವಿನಾಯ್ತಿ ಘೋಶಿಸಿದರು. ಸಿಪಿಎಂ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

