ಕಾಸರಗೋಡು: ಜಿಲ್ಲಾಡಳಿತ ಮತ್ತು ಜಿಲ್ಲಾ ಚುನಾವಣಾ ವಿಭಾಗ ವತಿಯಿಂದ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಕೋವಿಡ್ ಮಾನದಂಡ ಪಾಲಿಸಿಕೊಂಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಹುಜೂರ್ ಶಿರಸ್ತೇದಾರ್ ಎಸ್. ಶ್ರೀಜಯ ಪ್ರತಿಜ್ಞೆ ಬೋಧಿಸಿದರು.
ಈ ಸಂದರ್ಭ ಭಿತ್ತಿಪತ್ರ ರಚನಾ ಸ್ಪರ್ಧೆಯಲ್ಲಿ ಒಂದನೇ ಬಹುಮಾನ ಪಡೆದ ಎಡನೀರು ಸ್ವಾಮೀಜೀಸ್ ಹೈಯರ್ ಸಎಕೆಂಡರಿ ಶಾಲಾ ವಿದ್ಯಾರ್ಥಿನಿ ಶ್ರೀನಂದ, ಎರಡನೇ ಬಹುಮಾನ ಪಡೆದ ಮೊಗ್ರಾಲ್‍ಪುತ್ತೂರ್ ಟೆಕ್ನಿಕಲ್ ಶಾಲಾ ವಿದ್ಯಾರ್ಥಿನಿ ಅಮಿಷಾ ಎಸ್.ಕೆ, ಮೂರನೇ ಸ್ಥಾನ ಪಡೆದ ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿನಿ ಎಸ್. ಚೈತ್ರಾ ಎಂಬವರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆಸಲಾದ ಶಾರ್ಟ್ ಫಿಲ್ಮ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾಧಿಕಾರಿ ಹೊಣೆ ಹೊಂದಿರುವ ಎಡಿಎಂ ಎ.ಕೆ ರಮೇಂದ್ರನ್, ಜಿ.ಸುರೇಶ್‍ಬಾಬು, ರವೀಂದ್ರನ್, ಎ. ಗೋಪಾಲಕೃಷ್ಣನ್ ಉಪಸ್ಥಿತರಿದ್ದರು.

