ಕಾಸರಗೋಡು: 'ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್'ನಲ್ಲಿ ಒಳಪಡಿಸಿ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಜಿಲ್ಲೆಯಲ್ಲಿ ಜಾರಿಗೊಳಿಸಲಿರುವ ವಿವಿಧ ಯೋಜನೆಗಳಿಗೆ ತಾಂತ್ರಿಕ ಅನುಮತಿ ನೀಡಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ತಾಂತ್ರಿಕ ಸಮಿತಿ ಸಭೆಯಲ್ಲಿ ಈ ಬಗ್ಗೆ ಅನುಮತಿ ಮಂಜೂರುಗೊಳಿಸಲಾಯಿತು.
ಹೊಸದುರ್ಗ ಫಿಶ್‍ಲ್ಯಾಂಡಿಂಗ್ ಸೇಂಟರ್ ನಿರ್ಮಾಣಕ್ಕಾಗಿ 1.58ಕೋಟಿ, ಕಾಸರಗೋಡು ಸ್ಪೋಟ್ರ್ಸ್ ಕಾಂಪ್ಲೆಕ್ಸ್ ನಿರ್ಮಾಣಕ್ಕಾಗಿ 3.96ಕೋಟಿ, ಬದಿಯಡ್ಕ ಪಂಚಾಯಿತಿ ಉರ್ಮಿ ತೋಡು ಜಲಾನಯನ ಪ್ರದೇಶದ ನೆಡುಂಗಳ ವಾಟರ್‍ಶೆಡ್ ಯೋಜನೆಗೆ 49.34ಲಕ್ಷ ರೂ., ಎಣ್ಮಕಜೆ ಪಂಚಾಐಇತಿಯ ಪತ್ತಡ್ಕ ವಿ.ಸಿ.ಬಿ ನಿರ್ಮಾಣಕ್ಕೆ 1.09ಕೋಟಿ, ಆಯಂಕಡವು ಸೇತುವೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ 3.56ಕೋಟಿ, ಮಂಗಲ್ಪಾಡಿ ಪಂಚಾಐಇತಿ ಸ್ವರ್ಣಗಿರಿ ಜೊಳೆಗೆ ಅಡ್ಡ ಕುಬಣೂರು ವಿ.ಸಿ.ಬಿ ಕಂ ಬ್ರಿಜ್ ಮರು ನಿರ್ವಾಣಕ್ಕೆ 1.36ಕೋಟಿ, ವಲಿಯಪರಂಬ ಎಫ್‍ಎಚ್‍ಸಿ ಮೂಲಸೌಖರ್ಯ ಅಭಿವೃದ್ಧಿಗೆ 1.58ಕೋಟಿ, ಮೊಗ್ರಾಲ್‍ಪುತ್ತೂರು ಪಂಚಾಯಿತಿಯ ಮಧುವಾಹಿನಿ ಹೊಳೆಗೆ ಅಡ್ಡ ಕೊಕ್ಕುಂಜೆ ಅಣೆಕಟ್ಟು ನವೀಕರಣಕ್ಕೆ 2.34ಕೋಟಿ ರೂ. ಮೊತ್ತಕ್ಕೆ ತಾಂತ್ರಿಕ ಅನುಮತಿ ನೀಡಲಾಯಿತು. ನೀಲೇಶ್ವರ, ಹೊಸದುರ್ಗ ಮೀನುಕಾರ್ಮಿಕರಿಗೆ ಉದ್ಯೋಗಾಧರಿತ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳಿಗೆ ತಾಂತ್ರಿಕ ಅನುಮತಿ ಮಂಜೂರುಗೊಳಿಸಿರುವುದಾಗಿ ಕಾಸರಗೋಡು ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ ರಾಜ್‍ಮೋಹನ್ ತಿಳಿಸಿದ್ದಾರೆ.

