ಕಾಸರಗೋಡು: ಜಿಲ್ಲೆಯ ಪ್ರವಾಸೋದ್ಯಮ ವಲಯದ ಪ್ರಯೋಜನ ಪಡೆದುಕೊಳ್ಳುವ ಹಾಗೂ ಉದ್ಯೋಗ ಸಾಧ್ಯತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸ್ಥಾಪಿಸಲಾದ ಚಂದ್ರಗಿರಿ ಇಕೋ ಟೂರಿಸಂ ಕೋಓಪರೇಟಿವ್ ಸೊಸೈಟಿ ನೇತೃತ್ವದಲ್ಲಿ ಎರಿಞÂಪುಯ ಒಳಿಯತ್ತಡ್ಕದ ತುರುತ್ತಿ ಎಂಬಲ್ಲಿ ಇಕೋ ಟೂರಿಸಂ ಗ್ರಾಮವನ್ನು ಸ್ಥಾಪಿಸಲಾಗುವುದು. ಇಕೋ ಟೂರಿಸಂ ಗ್ರಾಮದ ಪ್ರೊಮೋ ವಿಡಿಯೋದ ಬಿಡುಗಡೆ ಸಮಾರಂಭ ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ಜರುಗಿತು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ ರಾಜ್‍ಮೋಹನ್ ವಿಡಿಯೋ ಹಾಗೂ ಚಿತ್ರನಟ ಸುಭೀಶ್ ಸುಧಿ ಬ್ರೋಶರ್ ಬಿಡುಗಡೆಗೊಳಿಸಿದರು. ಇಕೋಟೂರಿಸಂ ಗ್ರಾಂದಲ್ಲಿ ಹೊಳೆಗೆ ಹೊಂದಿಕೊಂಡು ಫುಟ್‍ಪಾತ್, ಸೈಕಲ್ ಟ್ರ್ಯಾಕ್, ಆಂಪಿ ತಿಯೇಟ1ರ್, ರೆಸ್ಟಾರೆಂಟ್, ಮಕ್ಕಳ ಪಾರ್ಕ್, ವೆಜಿಟೆಬಲ್ ಫಾರ್ಮ್ ತಲೆಯೆತ್ತಲಿದೆ. ಪ್ರಥಮ ಹಂತದ ಕಾಂಗಾರಿ ಏಪ್ರಿಲ್ ವೇಳೆಗೆ ಪೂರ್ತಿಗೊಳ್ಳಲಿರುವುದಾಗಿ ಸಿಜಿ ಮ್ಯಾಥ್ಯೂ ತಿಳಿಸಿದರು. ಪ್ರೆಸ್‍ಕ್ಲಬ್ ಕಾರ್ಯದರ್ಶಿ ಕೆ.ವಿ ಪದ್ಮೇಶ್, ಆರ್ಕಿಟೆಕ್ಟ್ ಲಕ್ಷ್ಮೀದಾಸ್, ಕೆ.ದಾಮೋದರನ್. ಕೆ. ಶಂಕರನ್, ಬಿ,ಕೆ ನಾರಾಯಣನ್, ಕೆ. ವಿನೋದ್ ಕುಮಾರ್ ಉಪಸ್ಥಿತರಿದ್ದರು.

