ಕೊಚ್ಚಿ: ಅಂಗಡಿಯಿಂದ ಖರೀದಿಸಿದ ಹಿಟ್ಟಿನಿಂದ ದೋಸೆ ತಯಾರಿಸಿದಾಗ ಚಿನ್ನದ ಮೂಗುತಿಯೊಂದು ಸಿಕ್ಕಿದೆ. ಧಾರಾವಾಹಿ ತಾರೆ ಸೂರ್ಯತಾರಾ ಚಿನ್ನದ ಮೂಗುತಿ ಪಡೆದರು. ಅವರು ಕಾಕ್ಕನಾಡಿನಲ್ಲಿ ವಾಸಿಸುತ್ತಿದ್ದಾರೆ.
ಸೋಮವಾರ ರಾತ್ರಿ ಎರೂರಿನ ಅಂಗಡಿಯಿಂದ ಖರೀದಿಸಿದ ದೋಶ ಕಂಪೆನಿಯ ಇಡ್ಲಿ ಹಿಟ್ಟು ಬಳಸಿ ಮರುದಿನ ದೋಸೆ ತಯಾರಿಸಲಾಗಿತ್ತು. ದೋಸೆ ಸೇವಿಸುವಾಗಲಷ್ಟೇ ಅದರಲ್ಲಿ ಮೂಗು ಪತ್ತೆಯಾಗಿದೆ. ದೋಸೆ ಹುಯ್ಯುವಾಗ ಮೂಗುತಿ ಗಮನಿಸಲಿಲ್ಲ. ಆದರೆ ನಾನು ಅದನ್ನು ತಿನ್ನಲು ತೆಗೆದುಕೊಂಡಾಗ, ಅದರೊಳಗೆ ಮೂಗುತಿ ಹೊಳೆಯುತ್ತಿರುವುದು ನನಗೆ ಕಂಡಿತು. ಅದನ್ನು ನೋಡಿದಾಗ ಅದು ಚಿನ್ನದ ಮೂಗುತಿ ಎಂದು ಅರಿವಾಯಿತು ಎಂದು ಸೂರ್ಯತಾರಾ ಹೇಳಿದ್ದಾರೆ.
ದೋಶ ಹಿಟ್ಟು ತ್ರಿಪುಣಿತ್ತುರದ ಪ್ರಮುಖ ಕಂಪನಿಯ ಮಾಲೀಕತ್ವದಲ್ಲಿದೆ. ಹಿಟ್ಟು ಪ್ಯಾಕ್ ಮಾಡುವಾಗ ಮೂಗುತಿ ಬಿದ್ದಿರÀಬಹುದು ಎಂದು ಭಾವಿಸಲಾಗಿದೆ. ಮಕ್ಕಳು ಗಮನ ಕೊಡದೆ ಸೇವಿಸುತ್ತಿದ್ದರೆ ಮೂಗುತಿ ಹೊಟ್ಟೆ ಸೇರುತ್ತಿತ್ತು ಎನ್ನುತ್ತಾರೆ ಸೂರ್ಯತಾರಾ ತಾಯಿ ಕಾರ್ತಿಕಾ.




