ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಅತಿಶೀಘ್ರ ವ್ಯಾಪಿಸುತ್ತಿರುವುದು ನಾಡಿನ ಜನತೆಯನ್ನು ಮತ್ತೆ ತಲ್ಲಣಗೊಳಿಸಿದೆ. ಕಳೆದವರ್ಷ ಕೋವಿಡ್ ಕಾಣಿಸಿಕೊಂಡಾಗ ಓಕ್ಸಿಜನ್‍ಗಾಗಿ ಜಿಲ್ಲೆಯ ಜನತೆ ಪರದಾಡಿದ ಪ್ರಸಂಗ ಮರುಕಳಿಸದಿರಲು ಜಿಪಂ ಆರಂಭಿಸಿದ ಆಕ್ಸಿಜನ್ ಉತ್ಪಾದನಾ ಘಟಕದ ಕಾಮಗಾರಿ ಇನ್ನೂ ಪೂರ್ತಿಗೊಂಡಿಲ್ಲ.
ಚಟ್ಟಂಚಾಲ್ ಕುನ್ನಾರ ಕೈಗಾರಿಕಾ ಪಾರ್ಕ್‍ನಲ್ಲಿ ಮೂರು ತಿಂಗಳೊಳಗೆ ತಲೆಯೆತ್ತಬೇಕಾಗಿದ್ದ ನಿರ್ದಿಷ್ಟ ಪ್ಲಾಂಟ್ ಆರು ತಿಂಗಳು ಕಳೆದರೂ ಕೆಲಸ ಪೂರ್ತಿಗೊಂಡಿಲ್ಲ. ಪ್ಲಾಂಟ್ ಕಾಮಗಾರಿ ಹಾಗೂ ಸಂಬಂಧಿತ ಕಾಮಗರಿ ನಡೆದಿದ್ದರೂ, ವಿದ್ಯುತ್ ಸಂಪರ್ಕ ಲಭ್ಯವಾಗದಿರುವುದರಿಂದ ಉಪಕರಣಗಳ ಜೋಡಣೆಯಲ್ಲಿ ವಿಳಂಬವುಂಟಾಗಿದೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ತೀವ್ರಗೊಂಡಾಗ ಜಿಲ್ಲಾ ಪಂಚಾಯಿತಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಮುಂದಾಗಿತ್ತು. ಜಿಪಂ ಕೈಗಾರಿಕಾ ಪಾರ್ಕ್‍ನ 50 ಸೆಂಟ್ ಜಾಗದಲ್ಲಿ 50ಲಕ್ಷ ರೂ ವೆಚ್ಚದಲ್ಲಿ ಪ್ಲಾಂಟ್ ಸ್ಥಾಪನೆಗೆ ಮುಂದಾಗಿತ್ತು. ಪ್ಲಾಂಟ್ ನಿರ್ಮಾಣಕ್ಕೆ ಆರಂಭದಲ್ಲಿ ತೋರಿಸಲಾದ ಉತ್ಸಾಹ ಕಡಿಮೆಯಾಗಿರುವುದಾಗಿ ನಾಗರಿಕರು ದೂರಿದ್ದಾರೆ. ಪ್ಲಾಂಟ್ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿರುವ ಕೊಚ್ಚಿಯ ಕೇರ್ ಸಿಸ್ಟಮ್ಸ್ ಆಕ್ಸಿಜನ್ ಪ್ಲಾಂಟ್‍ಗೆ ಬೇಕಾದ ಸಲಕರಣೆಯನ್ನು ಚಟ್ಟಂಚಾಲ್‍ಗೆ ತಲುಪಿಸಿದ್ದರೂ, ವಿದ್ಯುತ್ ಸಂಪರ್ಕ ಲಭ್ಯವಾಗದೆ ಕೆಲಸ ಮುಂದುವರಿಸಲು ಸಾಧ್ಯವಾಗಿರಲಿಲ್ಲ. 95 ಕಿಲೋ ವ್ಯಾಟ್ ಸಾಮಥ್ರ್ಯದ ವಿದ್ಯುತ್ ವಿತರಣಾ ವ್ಯವಸ್ಥೆ ಅಲವಡಿಸಲು ತೀಮಾನಿಸಿದ್ದರೂ, ಪ್ಲಾಂಟ್‍ನಲ್ಲಿ ಅಳವಡಿಸುವ ಸಲಕರಣೆಗಳ ಸಮಥ್ರ್ಯ ಹೆಚ್ಚಿರುವುದರಿಂದ ಇದನ್ನು 120ಕಿಲೋ ವಯಾಟ್‍ಗೆ ಹೆಚ್ಚಿಸಲೂ ತೀರ್ಮಾನಿಸಲಾಗಿದೆ.
ಜಿಲ್ಲೆಯಲ್ಲಿ ಐದು ಪ್ಲಾಂಟ್:
ಕಾಞಂಗಾಡು ಜಿಲ್ಲಾಸ್ಪತ್ರೆ, ಚಟ್ಟಂಚಾಲ್ ಕೈಗಾರಿಕಾ ಪಾರ್ಕ್, ಟಾಟಾ ಕೋವಿಡ್ ಆಸ್ಪತ್ರೆ, ಕಾಸರಗೋಡು ಜನರಲ್ ಆಸ್ಪತ್ರೆ ಹಾಗೂ ಉಕ್ಕಿನಡ್ಕದಲ್ಲಿರುವ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಓಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಅಭಿಮತ:
ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಆಕ್ಸಿಜನ್ ದಾಸ್ತಾನು ಪ್ರಕ್ರಿಯೆ ತ್ವರಿತಗೊಳಿಸಲಾಗುತ್ತಿದೆ. ನಿರ್ಮಾಣಹಂತದಲ್ಲಿರುವ ಪ್ಲಾಂಟ್‍ಗಳಿಗೆ ವಿದ್ಯುತ್ ಸಂಪರ್ಕಕ್ಕಿರುವ ಅಡಚಣೆ ಶೀಘ್ರ ಪರಿಹರಿಸಲಾಗುವುದು. ಟಾಟಾ ಕೋವಿಡ್ ಅಸ್ಪತ್ರೆ ಪ್ಲಾಂಟ್‍ನಲ್ಲಿ ಉತ್ಪಾದನೆ ಶೀಘ್ರ ಆರಂಭಗೊಳ್ಳಲಿದೆ. ಅಲ್ಲದೆ ಬಾಲ್ಕೋ ಸಂಸ್ಥೆಯಿಂದ ಪ್ರತಿದಿನ ಆಕ್ಸಿಜನ್ ಸಿಲಿಂಡರ್ ಜಿಲ್ಲೆಗೆ ತಲುಪಿಸಲಾಗುತ್ತಿದೆ.
ಭಂಡಾರಿ ಸ್ವಾಗತ್ ರಣವೀರ್‍ಚಂದ್,
ಜಿಲ್ಲಾಧಿಕಾರಿ ಕಾಸರಗೋಡು




