ಕಾಸರಗೋಡು: ಕೇರಳದ ಎಲ್ಲಿ ಗ್ರಾಮಗಳಲ್ಲೂ ಭೂಮಿಯ ಡಿಜಿಟಲ್ ಸರ್ವೇ ನಡೆಸುವ ನಿಟ್ಟಿನಲ್ಲಿ ಮುಟ್ಟತ್ತೋಡಿ ಗ್ರಾಮದಲ್ಲಿ ಜನಪ್ರತಿನಿಧಿಗಳಿಗಾಗಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಚೆಂಗಳ ಗ್ರಾಪಂ ಉಪಾಧ್ಯಕ್ಷೆ ಸಫಿಯಾ ಹಾಸಿಂ ಸಮಾರಂಭ ಉದ್ಘಾಟಿಸಿದರು. ಸರ್ವೇ ಸಹಾಯಕ ಸುನಿಲ್ ಜೋಸೆಫ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು.
ಸರ್ವೇ ಉಪ ನಿರ್ದೇಶಕ ಎಸ್. ಸಲೀಂ ತರಗತಿ ನಡೆಸಿದರು. ಪ್ರಚಾರ ಸಮಿತಿ ಅಧಿಕಾರಿಗಳಾದ ನರೇಶ್ ಕುಮಾರ್ ಕೆ, ಕೆ.ಪಿ ಗಂಗಾಧರನ್ ಮುಂತಾದವರು ಉಪಸ್ಥಿತರಿದ್ದರು.




