ಮಂಜೇಶ್ವರ : ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಶ್ರೀ ಅರಸು ಕೃಪಾ ಹವ್ಯಾಸಿ ಯಕ್ಷಗಾನ ಸಂಘ ಉದ್ಯಾವರ ಮಾಡ ಇವರ ಆಶ್ರಯದಲ್ಲಿ "ಹಿರಿಯರ ನೆನಪು" ಕಾರ್ಯಕ್ರಮ ಜ. 23 ರಂದು ಭಾನುವಾರ ಅಪರಾಹ್ನ 2.30ರಿಂದ ತಿಯಾ ಸಮಾಜ ಭವನ ಉದ್ಯಾವರ ಮಾಡದಲ್ಲಿ ಜರಗಲಿದೆ.
ಸಮಾರಂಭದ ಭಾಗವಾಗಿ ಕೀರ್ತಿಶೇಷ ವಾಮನ್ ಮಾಸ್ತರ್ ಉದ್ಯಾವರ ಯಕ್ಷಗಾನ ಅರ್ಥಧಾರಿ, ಕೀರ್ತಿಶೇಷ ಪುರುಷೋತ್ತಮ ದಾಸ್ ಸಂಘದ ಗೌರವಾಧ್ಯಕ್ಷರು, ಕೀರ್ತಿಶೇಷ ಬೊಟ್ಟಿಗೆರೆ ಪುರುಷೋತ್ತಮ ಪೂಂಜ ಹಿರಿಯ ಭಾಗವತ ಹಾಗೂ ಪ್ರಸಂಗಕರ್ತರು ಅವರ ಸಂಸ್ಮರಣೆ ನಡೆಯಲಿದೆ.
ತಿಯಾ ಸಮಾಜ ಭವನ ಮಾಡದ ಅಧ್ಯಕ್ಷ ನೀಲಯ್ಯ ಪೂಮಣ್ಣು ದೀಪ ಪ್ರಜ್ವಲನೆಗೈಯ್ಯುವರು. ಉದ್ಯಾವರ ಮಾಡ ಶ್ರೀ ದೈವಸ್ಥಳದ ಆಡಳಿತ ಮೊಕ್ತೇಸರ ರಘು ಶೆಟ್ಟಿ ಕುಂಜತ್ತೂರು ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ, ಧಾರ್ಮಿಕ ಮುಂದಾಳು ಕೃಷ್ಣ ಶಿವಕೃಪಾ ಕುಂಜತ್ತೂರು, ಯಕ್ಷಗಾನ ಅಕಾಡೆಮಿ ಸದಸ್ಯ ದಾಮೋದರ ಶೆಟ್ಟಿ, ಕಣಿಪುರ ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ.ಚಂಬಲ್ತಿಮಾರ್, ಉಪಸ್ಥಿತÀರಿರುವರು. ಬಳಿಕ ಶ್ರೀಕೃಷ್ಣ ಪರಂಧಾಮ ಯಕ್ಷಗಾನ ತಾಳಮದ್ದಳೆ ಜರಗಲಿದೆ.




