ನವದೆಹಲಿ :ಸಮಾಜದವನ್ನು ಧ್ರುವೀಕರಣಗೊಳಿಸಲು ಹಾಗೂ ಹಿಂದೂ-ಮುಸ್ಲಿಂ ವಿಷಯಗಳನ್ನು ಕೆದಕುವ ಮೂಲಕ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಸ್ಥಾಪಿತ ಹಿತಾಸಕ್ತಿಯಿಂದ ನಡೆಯುತ್ತಿರುವ ಬಗ್ಗೆ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್ ರೈತರನ್ನು ಎಚ್ಚರಿಸಿದ್ದಾರೆ.
0
samarasasudhi
ಜನವರಿ 25, 2022
ನವದೆಹಲಿ :ಸಮಾಜದವನ್ನು ಧ್ರುವೀಕರಣಗೊಳಿಸಲು ಹಾಗೂ ಹಿಂದೂ-ಮುಸ್ಲಿಂ ವಿಷಯಗಳನ್ನು ಕೆದಕುವ ಮೂಲಕ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಸ್ಥಾಪಿತ ಹಿತಾಸಕ್ತಿಯಿಂದ ನಡೆಯುತ್ತಿರುವ ಬಗ್ಗೆ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್ ರೈತರನ್ನು ಎಚ್ಚರಿಸಿದ್ದಾರೆ.
ಇಗಲಾಸ್‌ನ ಸಮೀಪ ರವಿವಾರ ರಾತ್ರಿ ಆಯೋಜಿಸಲಾಗಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭ ಮಾದ್ಯಮದವರೊಂದಿಗೆ ಮಾತನಾಡಿದ ಟಿಕಾಯತ್, ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ತಮ್ಮ ಆಯ್ಕೆಯನ್ನು ವಿಮರ್ಶಿಸುವ ಪ್ರಾಮುಖ್ಯತೆ ಬಗ್ಗೆ ಅವರು ಸಂಪೂರ್ಣ ಪ್ರಜ್ಞಾವಂತರಾಗಿದ್ದಾರೆ. ಅಲ್ಲದೆ, ಅವರನ್ನು ಪ್ರೇರೇಪಿಸುವ ಅಗತ್ಯತೆ ಇಲ್ಲ ಎಂದು ಹೇಳಿದರು.
ಕೆಲವು ವಾರಗಳಲ್ಲಿ ಹಿಂದೂ-ಮುಸ್ಲಿಂ ಹಾಗೂ ಜಿನ್ನಾ ರಾಜಕೀಯ ಚರ್ಚೆಯ ಪ್ರಮುಖ ವಿಷಯವಾಗಲಿದೆ. ಅಂತಹ ಗೊಂದಲಗಳ ಬಗ್ಗೆ ನೀವು ಜಾಗರೂಕರಾಗಿರಬೇಕು ಎಂದು ರಾಕೇಶ್ ಟಿಕಾಯತ್ ಹೇಳಿದರು.