ತಿರುವನಂತಪುರ: ರಸ್ತೆ ಅಪಘಾತದಲ್ಲಿ ವಾಯುಪಡೆಯ ಕೇರಳೀಯ ಪೈಲಟ್ ಸಾವನ್ನಪ್ಪಿದ್ದಾರೆ. ಯುದ್ಧ ವಿಮಾನ ಸುಖೋಯ್‍ನ ಪೈಲಟ್ ಜಾರ್ಜ್ ಕುರಿಯಾಕೋಸ್ ಮೃತಪಟ್ಟವರು. ಅಸ್ಸಾಂನಲ್ಲಿ ತೆಸ್ಪುರ್‍ನಿಂದ ಜೋರ್ಹತ್‍ಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಕಿಳಕಂಬಲಂ ಮೂಲದ ಜಾರ್ಜ್ ಕುರಿಯಾಕೋಸ್ (25) ಫ್ಲೈಟ್ ಲೆಫ್ಟಿನೆಂಟ್ ಆಗಿದ್ದರು. ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರ ಕಾರು ಎದುರಿನಿಂದ ಬರುತ್ತಿದ್ದ ಟ್ರೇಲರ್‍ಗೆ ಡಿಕ್ಕಿ ಹೊಡೆದು ಅಪಘಾತ ನಡೆದಿದೆ. ಟ್ರೇಲರ್ ಚಾಲಕ ಕೂಡ ಗಾಯಗೊಂಡಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ಇದೆ. ಅಪಘಾತದ ರಭಸಕ್ಕೆ ಜಾರ್ಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಜಾರ್ಜ್ ಅವರ ಸಂಬಂಧಿಕರು ಅಸ್ಸಾಂಗೆ ತೆರಳಿರುವÀರು. ಜಾರ್ಜ್ ವೆಲ್ಲೂರು ಪಾಕಮಟ್ಟಂನ ಪಿ.ಪಿ.ಕುರಿಯಾಕೋಸ್ ಮತ್ತು ಗ್ರೇಸಿ ಕುರಿಯಾಕೋಸ್ ದಂಪತಿಯ ಪುತ್ರ.



