ನವದೆಹಲಿ: ಹಿಜಾಬ್ ವಿವಾದ ದೇಶ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪಾಕಿಸ್ತಾನ, ಅಮೆರಿಕ ಹೀಗೆ ಒಂದರ ನಂತರ ಒಂದು ದೇಶಗಳು ಪ್ರತಿಕ್ರಿಯೆ ನೀಡುತ್ತಾ ಹೋಗುತ್ತಿವೆ. ಇದರಿಂದ ವಿವಾದ ಮತ್ತಷ್ಟು ಭುಗಿಲೇಳುವ ಸಾಧ್ಯತೆಯಿದೆ.
ಹಿಜಾಬ್ ವಿವಾದ ಭಾರತದ ಅದರಲ್ಲೂ ಕರ್ನಾಟಕದ ಒಂದು ಪ್ರದೇಶದಿಂದ ಆರಂಭವಾಗಿದ್ದು. ಇದು ಸಂಪೂರ್ಣವಾಗಿ ದೇಶದ ಆಂತರಿಕ ವಿಚಾರ. ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ವಸ್ತ್ರ ಸಂಹಿತೆ ವಿವಾದ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಹಿಜಾಬ್ ಮತ್ತು ಮಕ್ಕಳ ವಸ್ತ್ರಸಂಹಿತೆ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡುವುದನ್ನು ಸರ್ಕಾರ ಒಪ್ಪುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟ ಪ್ರಕಟಣೆ ಹೊರಡಿಸಿದೆ.

