HEALTH TIPS

5 ರಾಜ್ಯಗಳ ಚುನಾವಣೆಯಲ್ಲಿ ಗೆದ್ದ ಮಹಿಳೆಯರು 76 ಮಾತ್ರ

           ನವದೆಹಲಿ: ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 760 ಮಹಿಳೆಯರ ಪೈಕಿ 76 ಮಹಿಳೆಯರು ಮಾತ್ರ ಚುನಾಯಿತರಾಗಿದ್ದಾರೆ ಎಂದು ರಾಜ್ಯಸಭೆಗೆ ಸರ್ಕಾರ ಮಾಹಿತಿ ನೀಡಿತು.

         ರಾಜ್ಯಸಭೆಗೆ ಗುರುವಾರ ಲಿಖಿತ ಉತ್ತರ ನೀಡಿದ ಕಾನೂನು ಸಚಿವ ಕಿರಣ್ ರಿಜಿಜು, ಐದೂ ರಾಜ್ಯಗಳಲ್ಲಿ ಸ್ಪರ್ಧಿಸಿದ್ದ ಹಾಗೂ ಗೆದ್ದ ಮಹಿಳೆಯರ ಸಂಖ್ಯೆಯ ಮಾಹಿತಿ ಒದಗಿಸಿದ್ದಾರೆ.

          ಮಾಹಿತಿ ಪ್ರಕಾರ, ಒಟ್ಟು 6,944 ಅಭ್ಯರ್ಥಿಗಳ ಪೈಕಿ 760 ಮಹಿಳೆಯರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಇದರಲ್ಲಿ ಯಶಸ್ವಿಯಾದವರು 76 ಮಹಿಳೆಯರು ಮಾತ್ರ ಎಂದು ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮತದಾರರು 47 ಮಹಿಳೆಯರನ್ನು ಶಾಸನಸಭೆಗೆ ಕಳುಹಿಸಿದ್ದಾರೆ. ರಾಜ್ಯದಲ್ಲಿ 561 ಮಹಿಳೆಯರು ಸ್ಪರ್ಧಿಸಿದ್ದರು. ಗೋವಾದಲ್ಲಿ ಸ್ಪರ್ಧಿಸಿದ್ದ ಒಟ್ಟು 301 ಅಭ್ಯರ್ಥಿಗಳ ಪೈಕಿ 26 ಮಹಿಳೆಯರಿದ್ದರು. ಇವರಲ್ಲಿ ಮೂವರು ಮಾತ್ರ ಗೆದ್ದಿದ್ದಾರೆ. ಮಣಿಪುರ ವಿಧಾನಸಭೆಗೆ 265 ಜನ ಸ್ಪರ್ಧೆ ಮಾಡಿದ್ದರು. ಗೆದ್ದವರು ಐವರು ಮಾತ್ರ.

               ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮತದಾರರ ಭಾಗವಹಿಸುವಿಕೆ ಗಮನಾರ್ಹವಾಗಿ ಹೆಚ್ಚಳವಾಗಿತ್ತು. ಗೋವಾ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಹೆಚ್ಚಿನ ಸಂಖ್ಯೆಯ ಮಹಿಳಾ ಮತದಾರರು ಮತ ಚಲಾವಣೆ ಮಾಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries