ವಯನಾಡು: ಕೆಲವು ಸಮಯಗಳ ಬಳಿಕ ಇದೀಗ ಬಾಳೆಹಣ್ಣು ಮತ್ತು ಇತರ ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ವಯನಾಡು, ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಪ್ರಸ್ತುತ ಬಾಳೆಹಣ್ಣಿನ ಬೆಲೆ ಕೆಜಿಗೆ 45 ರೂ. ಇದೆ. ಮುಂದಿನ ದಿನಗಳಲ್ಲಿ ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.
ಕಳೆದ 20 ದಿನಗಳಿಂದ ಬಾಳೆಹಣ್ಣಿನ ಬೆಲೆ ಗಣನೀಯವಾಗಿ ಏರಿಳಿತ ಕಾಣಲಾರಂಭಿಸಿದೆ. ಬಾಳೆಹಣ್ಣು ಮತ್ತು ಹಣ್ಣುಗಳಿಗೆ ಹೆಚ್ಚುತ್ತಿರುವ ಬೇಡಿಕೆಯೇ ಇದಕ್ಕೆ ಕಾರಣ. ಕೃಷಿ ಲಾಭದಾಯಕವಲ್ಲ ಎಂದು ಕಂಡ ಅನೇಕ ರೈತರು ಬಾಳೆ ಕೃಷಿಯಿಂದ ದುಯರ ಉಳಿದಿದ್ದರು. ಇದರಿಂದ ಬಾಳೆಗೆ ಕೊಂಚ ಕೊರತೆಯಾಗಿದೆ. ಇದು ಕೂಡ ಬೆಲೆ ಏರಿಕೆಗೆ ಕಾರಣವಾಗಲಿದೆ.

