ಕಾಸರಗೋಡು|: ಕುಟುಂಬಶ್ರೀ ಜಿಲ್ಲಾ ಮಿಷನ್ ಆಶ್ರಯದಲ್ಲಿ ವರದಕ್ಷಿಣೆ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಲಿಂಗ ಸಮಾನತೆ ಕುರಿತು ಜಾಗೃತಿ ಅಭಿಯಾನ ಜಿಲ್ಲೆಯಲ್ಲಿ ತನ್ನ ಪರ್ಯಟನೆ ಮುಂದುವರಿಸಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಸಮಾಜದಲ್ಲಿ ಮತ್ತು ಮನೆಯಲ್ಲಿ ಸುರಕ್ಷಿತತೆಯ ಬಗ್ಗೆ ಜಾಗೃತಿ ಮೂಡಿಸುವ ಅರಿವಿನೊಂದಿಗೆ ಸ್ತ್ರೀಶಕ್ತಿ ಕಲಾಜಾಥಾ ಆರಂ|ಭಿಸಲಾಗಿದೆ. ಕಲಾಜಾಥಾ ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪರ್ಯಟನೆ ಮುನ್ನಡೆಸುತ್ತಿದೆ. ಮತ್ತು 14 ಶಿಕ್ಷಣ ಸಂಸ್ಥೆಗಳು ಕೈಜೋಡಿಸಿವೆ.
ಮಾ.8ರಂದು ಆರಂಭವಾದ ಕಲಾ ಜಾಥಾ ಮಾ.23ರವರೆಗೆ ನಡೆಯಲಿದೆ. ಕುಟುಂಬಶ್ರೀ ಸಹಾಯಕ ಜಿಲ್ಲಾ ಮಿಷನ್ ಸಂಯೋಜಕ ಪ್ರಕಾಶನ್ ಪಾಲಾಯಿ ಜಾಥಾ ನಿರ್ವಾಹಕರಾಗಿ, ನಿಶಾ ಮ್ಯಾಥ್ಯೂ ಜಾಥಾ ನಾಯಕಿಯಾಗಿದ್ದಾರೆ. ಉದಯನ್ ಕುಂಡಂಗುಳಿ ತರಬೇತುದಾರರಾಗಿದ್ದಾರೆ. ರಂಗಶ್ರೀ ತಂಡದ ಸದಸ್ಯರಾದ ನಿಶಾ ಮ್ಯಾಥ್ಯೂ, ಕೆ.ವಿ.ಅಜಿಶಾ, ಕೆ.ಲತಾ, ಕೆ.ಸುಮತಿ, ಕೆ.ಬಿಂದು, ಕೆ.ಟಿ.ರಜಿಶಾ, ಕೆ.ವಿ.ಸಿಲ್ನಾ, ಕೆ.ಬೀನಾ, ದೀಪಾ ಪ್ರವೀಣ್, ಚಿತ್ರಾ ಪಟ್ನಾ, ಸಿಂಧುಬಾಬು, ಭಾಗೀರಥಿ ನಾಟಕ ಕಲಾವಿದರಾಗಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

