ಕಾಸರಗೋಡು: ವಿಶ್ವ ಗ್ರಾಹಕ ದಿನದ ಅಂಗವಾಗಿ ಜಿಲ್ಲಾ ಪೂರೈಕೆ ಕಛೇರಿ ವತಿಯಿಂದ ನಡೆದ ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಕಾಸರಗೋಡು ನಗರಸಭಾ ಉಪಾಧ್ಯಕ್ಷೆ ಶಂಸೀದಾ ಫಿರೋಜ್ ಉದ್ಘಾಟಿಸಿದರು.
ಗ್ರಾಹಕರು ಶೋಷಣೆಗೆ ಒಳಗಾಗುವ ಅವಕಾಶಗಳನ್ನು ತೊಡೆದುಹಾಕಲು ಗ್ರಾಹಕರ ರಕ್ಷಣೆ ಕಾನೂನುಗಳ ಬಗ್ಗೆ ಎಲ್ಲಾ ವರ್ಗದ ಜನರಿಗೆ ಅರಿವು ಮೂಡಿಸಬೇಕು ಎಂದು ಶಂಸಿದಾ ಫಿರೋಜ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಿಡಿಆರ್‍ಸಿ (ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ) ಅಧ್ಯಕ್ಷ ಕೆ. ಸಿಡಿಆರ್‍ಸಿ ಕಾಸರಗೋಡು ಸದಸ್ಯ ರಾಧಾಕೃಷ್ಣನ್ ಪೆರುಂಬಳ ‘ಗ್ರಾಹಕ ಸಂರಕ್ಷಣಾ ಕಾಯ್ದೆ-2019’ ಕುರಿತು ಮುಖ್ಯ ಭಾಷಣ ಮಾಡಿದರು. ನ್ಯಾಯವಾದಿ ಇ.ಕೆ.ನಸೀಮಾ, ಚಂದ್ರನ್ ಆರಂಗಡಿ ಮಾತನಾಡಿದರು.ಜಿಲ್ಲಾ ಪೂರೈಕೆ ಅಧಿಕಾರಿ ಕೆ.ಪಿ.ಅನಿಲ್ ಕುಮಾರ್ ಸ್ವಾಗತಿಸಿ, ಜಿಲ್ಲಾ ಕಾನೂನು ಮಾಪನಶಾಸ್ತ್ರ ಉಪ ನಿಯಂತ್ರಣಾಧಿಕಾರಿ ಪಿ.ಶ್ರೀನಿವಾಸ ವಂದಿಸಿದರು.

