ಮತಾಂತರಗೊಂಡವರನ್ನು ಪರಿಶಿಷ್ಟ ಜಾತಿಗೆ ಸೇರಿಸಬಾರದೆಂದು ಪ್ರಧಾನ ಮಂತ್ರಿಯವರಿಗೆ ಮನವಿ
0
ಮಾರ್ಚ್ 17, 2022
ಬದಿಯಡ್ಕ: ದಲಿತ ಕ್ರಿಶ್ಚಿಯನ್ ಹಾಗೂ ದಲಿತ ಮಸ್ಲಿಮರನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸಬಾರದೆಂದು ಕೇರಳ ರಾಜ್ಯ ಮೊಗೇರ ಸರ್ವಿಸ್ ಸೊಸೈಟಿ ಪ್ರಧಾನ ಮಂತ್ರಿಯವರಿಗೆ ಲಿಖಿತ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಮತಾಂತರಗೊಂಡ ದಲಿತ ಕ್ರಿಶ್ಚಯನ್ ಹಾಗೂ ದಲಿತ ಮುಸ್ಲಿಮರು ಆರ್ಥಿಕವಾಗಿ, ವಿದ್ಯಾಭ್ಯಾಸ ಹಾಗೂ ರಾಜಕೀಯವಾಗಿ ಬಲಿಷ್ಠರಾಗಿದ್ದು ಅವರನ್ನು ಪರಿಶಿಷ್ಠಜಾತಿಗೆ ಸೇರಿಸಿದರೆ ಸರ್ಕಾರದ ಎಲ್ಲಾ ಸವಲತ್ತುಗಳು ಅವರ ಪಾಲಾಗಬಹುದು ಎಂದು ಕಳವಳ ವ್ಯಕ್ತಪಡಿಸಿದೆ. ಪರಿಶಿಷ್ಟ ಜಾತಿಯವರನ್ನು ಅಭಿವೃದ್ಧಿಗೊಳಿಸಲು ಹೆಚ್ಚಿನ ಪ್ಯಾಕೇಜ್‍ಗಳನ್ನು ಅಂಗೀಕರಿಸಿ ಜಾರಿಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕುಂಬಳೆಯಲ್ಲಿ ಜರಗಿದ ಮೊಗೇರ ಸರ್ವೀಸ್ ಸೊಸೈಟಿಯ ಸಭೆಯಲ್ಲಿ ವಿ. ಲಕ್ಷ್ಮಣ ಪೆರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಕೆ.ಸ್ವಾಮಿಕೃಪಾ ಸ್ವಾಗತಿಸಿದ ಸಭೆಯಲ್ಲಿ ಗಣೇಶ್ ಸಿ.ಕೆ, ಬಾಬೂ ಕುಳೂರು, ಗಿರಿಜಾ ತಾರನಾಥ್ ಕುಂಬಳೆ, ಸುಂದರ ಕಾಯಿಮಲೆ, ಬಾಲಕೃಷ್ಣ ಗೋಳಿಕಟ್ಟೆ, ಶೇಖರ ಬೇಕಲ್, ಪೊನ್ನಪ್ಪ ಅಮ್ಮಂಗೋಡು, ಸುಂದರ ಕಜೆ ಮೊದಲಾದವರು ಮಾತನಾಡಿದರು. ಕಾರ್ಯದರ್ಶಿ ಆದರ್ಶ ಪಟ್ಟತಮೊಗೇರ್ ವಂದಿಸಿದರು.
Tags




