ತಲೆಬೈಲು ಮಠ ಶ್ರೀ ನರಸಿಂಹ ದೇವರಿಗೆ ನೂತನ ಸೋಪಾನ ಪೀಠ ಸಮರ್ಪಣೆ
0
ಮಾರ್ಚ್ 17, 2022
ಮುಳ್ಳೇರಿಯ: ಮವ್ವಾರು ಸಮೀಪದ ತಲೆಬೈಲು ಶ್ರೀ ಕಾಣಿಯೂರು ಶ್ರೀ ನರಸಿಂಹ ದೇವರ ಮಠದಲ್ಲಿ ಶ್ರೀ ದೇವರಿಗೆ ನೂತನ ಸೋಪಾನ ಪೀಠವನ್ನು ಸಮರ್ಪಿಸಲಾಯಿತು. ಉಡುಪಿ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರ ಅನುಗ್ರಹ ಮತ್ತು ಮಾರ್ಗದರ್ಶನದಂತೆ ಅವರ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಜರಗಿತು.
ಶ್ರೀಮಠದ ಭಕ್ತರಾದ ಬೆಂಗಳೂರಿನ ವೇದಮೂರ್ತಿ ಗುರುರಾಜ ಆಚಾರ್ಯ ಅವರು ಸೋಪಾನ ಪೀಠವನ್ನು ಸೇವಾರೂಪವಾಗಿ ಸಮರ್ಪಿಸಿದ್ದರು. ಬೆಳಗ್ಗೆ ಗಣಪತಿ ಹೋಮ, ಶ್ರೀ ನರಸಿಂಹ ದೇವರ ಪೀಠ ಪ್ರತಿಷ್ಠೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಉಡುಪಿ ಕಾಣಿಯೂರು ಮಠ ಅಧೀನದಲ್ಲಿರುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯಲಿವೆ.
Tags




