ಭರತಭೂಮಿಯಲ್ಲಿ ಹಿಂದುತ್ವ ಸದಾ ಅಜರಾಮರ : ರಾಧಾಕೃಷ್ಣ ಅಡ್ಯಂತಾಯ
0
ಮಾರ್ಚ್ 17, 2022
ಉಪ್ಪಳ: ಕೋಮುವಾದ, ಲವ್ ಜಿಹಾದ್ ಇನ್ನಿತರ ಷಡ್ಯಂತರಗಳು ಭರತ ಭೂಮಿಯ ಹಿಂದೂ ಧರ್ಮ ಹಾಗೂ ದೇಶವನ್ನು ಕೆಡಿಸಲು ಟೊಂಕ ಕಟ್ಟಿ ನಿಂತಿದ್ದರೂ ಕೂಡಾ ಪುರಾಣ ಚರಿತೆಯ ಇತಿಹಾಸದಂತೆ ಮತ್ತೆ ಮತ್ತೆ ಧರ್ಮ ಪುನರುದ್ಧರಣದ ಮಹಾತ್ಮರು, ಮಕ್ಕಳು ಜನಿಸುತ್ತಲೇ ಹಿಂದುತ್ವ ಎಂದೂ ಅಜರಾಮರವಾಗಿರುತ್ತದೆ ಎಂದು ಕರ್ನಾಟಕ ಹಿಂದೂ ಜಾಗರಣ ವೇದಿಕೆ ಪ್ರಮುಖ್ ರಾಧಾಕೃಷ್ಷ ಅಡ್ಯಂತಾಯ ಅಭಿಪ್ರಾಯಪಟ್ಟರು.
ಅವರು ಯುವಕೇಸರಿ ಫ್ರೆಂಡ್ಸ್ ಕ್ಲಬ್ ಶಿವತೀರ್ಥಪದವು ಮುಳಿಂಜ ಇದರ 12ನೇ ವಾರ್ಷಿಕೋತ್ಸವದ ಅಂಗವಾಗಿ ಮುಳಿಂಜ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕ್ಷೇತ್ರ ಪರಿಸರದಲ್ಲಿ ವಿಶೇಷವಾಗಿ ಸಜ್ಜೀಕರಿಸಿದ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದಿಕ್ಸೂಚಿ ಭಾಷಣಗೈದರು.
ಮಹಾಲಿಂಗೇಶ್ವರ ಸೇವಾ ಸಮಿತಿ ಮುಳಿಂಜ ಇದರ ಅಧ್ಯಕ್ಷ ಹರಿನಾಥ್ ಭಂಡಾರಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಪತ್ವಾಡಿ ತಿಮ್ಮಪ್ಪ ಶೆಟ್ಟಿ, ಬಾಬು ಶೆಟ್ಟಿ ಗುಡ್ಡೆಮಾರ್, ವಿಶ್ವನಾಥ್ ಶೆಟ್ಟಿ ಕುಂಟುಪುಣಿ,ವಿಜಯ್ ಪಂಡಿತ್ ಭಗವತಿ, ಭಾಸ್ಕರ ಕೊಂಡೆವೂರು, ರಾಜೇಶ್ ದೇವಾಡಿಗ ಸಂತಡ್ಕ, ಯುವ ಕೇಸರಿ ಸಂಘಟನೆಯ ಅಧ್ಯಕ್ಷ ಸದಾನಂದ ಶೆಟ್ಟಿ ಕುಂಟುಪುಣಿ, ಯುವ ಕೇಸರಿ ಸಂಘಟನೆಯ ಸ್ಥಾಪಕ, ಮಾರ್ಗದರ್ಶಕ ಯಜ್ಞೇಶ್ ಶಿವತೀರ್ಥಪದವು ಮೊದಲಾದವರು ಉಪಸ್ಥಿತರಿದ್ದರು. ಸತೀಶ್ ಮುಳಿಂಜ ಪ್ರಾಸ್ತಾವನೆಗೈದು ಸ್ವಾಗತಿಸಿ ದಿನೇಶ್ ಮುಳಿಂಜ ವಂದಿಸಿದರು.
ಬಳಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಲಕುಮಿ ಕಲಾವಿದೆರ್ ಕುಡ್ಲ ಅವರಿಂದ ತುಳು ನಾಟಕ ಪ್ರದರ್ಶನಗೊಂಡಿತು.
Tags




