ಬದಿಯಡ್ಕ|: ಶಿಕ್ಷಣದಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ ಶಿಕ್ಷಣಮಟ್ಟದ ಬೆಳವಣಿಗೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಸಹಾಯ ಹಸ್ತವಾಗಿ ನವಜೀವನ ಯೋಜನೆಗೆ ನವಜೀವನ ಪ್ರೌಢಶಾಲೆಯಲ್ಲಿ ಚಾಲನೆ ನೀಡಲಾಯಿತು.
ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗಲಿರುವ ಮುಖ್ಯೋಪಾಧ್ಯಾಯಿನಿ ತಂಗಮಣಿ ಟೀಚರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ವಿದ್ಯಾರ್ಥಿಗಳ ಭವಿಷ್ಯ ಈ ಯೋಜನೆಯ ಮೂಲಕ ಬೆಳಗಲಿ ಎಂದು ತಿಳಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಮುನಿಯೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಉತ್ತಮ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ನಿರ್ಮಲ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಬಿಪಿಸಿ ಜಯರಾಮ್, ಆಡಳಿತ ಮಂಡಳಿ ಸದಸ್ಯ ಕೃಷ್ಣಪ್ರಸಾದ್ ರೈ ಪೆರಡಾಲ, ಉಷಾ ಕುಮಾರಿ ಶುಭ ಹಾರೈಸಿದರು. ನೌಕರ ಸಂಘದ ಕಾರ್ಯದರ್ಶಿ ಕವಿತಾ ಟೀಚರ್ ಸ್ವಾಗತಿಸಿ, ಎಂ ಉಣ್ಣಿಕೃಷ್ಣನ್ ಮಾಸ್ತರ್ ವಂದಿಸಿದರು. ನಿರಂಜನ್ ರೈ ಪೆರಡಾಲ ನಿರೂಪಿಸಿದರು. ರಾಜೇಶ್ ಮಾಸ್ತರ್ ಆಗಲ್ಪಾಡಿ ಸಹಕರಿಸಿದರು.

.jpg)
