ಪೆರ್ಲ: ಎಣ್ಮಕಜೆ ಗ್ರಾ.ಪಂ.ನಿಂದ ಎಸ್.ಸಿ ಎಸ್.ಟಿ. ವಿದ್ಯಾರ್ಥಿಗಳಿಗೆ ಲ್ಯಾಪ್ ಟೋಪ್ ವಿತರಣೆ ಹಾಗೂ ಎಸ್.ಟಿ.ವಿಕಲಚೇತನರಿಗೆ ತ್ರಿಚಕ್ರ ವಾಹನ ಹಸ್ತಾಂತರ ಕಾರ್ಯಕ್ರಮ ಸೋಮವಾರ ನಡೆಯಿತು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಹಂಸಾರ್,ಬ್ಲಾಕ್ ಪಂ.ಸದಸ್ಯ ಬಟ್ಟು ಶೆಟ್ಟಿ,ಅನಿಲ್ ಕುಮಾರ್ ಕೆ.ಪಿ, ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಅರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್, ಪಂ. ಸದಸ್ಯರಾದ ಮಹೇಶ್ ಭಟ್, , ಇಂದಿರಾ, ರಾಮಚಂದ್ರ, ನರಸಿಂಹ ಪೂಜಾರಿ, ರೂಪವಾಣಿ ಆರ್.ಭಟ್, ರಮ್ಲಾ ಇಬ್ರಾಹಿಂ,ರಾಧಾಕೃಷ್ಣ ನಾಯಕ್ ಶೇಣಿ, ಕುಸುಮಾವತಿ,ಉಷಾ ಗಣೇಶ್, ಆಶಾಲತಾ, ಪಿಇಸಿ ಕಾರ್ಯದರ್ಶಿ ದಿನೇಶ್ ಮಾಸ್ತರ್,ಐಸಿಡಿಎಸ್ ಸೂಪರ್ ವೈಸರ್ ಪ್ರೇಮಲತಾ, ಎಸ್.ಸಿ.ಎಸ್.ಟಿ.ಪೆÇ್ರೀಮೊಟರ್ ಗಳು ಭಾಗವಹಿಸಿದ್ದರು.

.jpg)
.jpg)
.jpg)
.jpg)
