HEALTH TIPS

ಈಶಾನ್ಯ ರಾಜ್ಯದಿಂದ ಎಎಫ್ಎಸ್ ಪಿಎ ಪೂರ್ಣ ರದ್ದತಿಗೆ ಕ್ರಮ: ಪ್ರಧಾನಿ ಮೋದಿ

         ಅಸ್ಸಾಂ: ಈಶಾನ್ಯ ರಾಜ್ಯಗಳಲ್ಲಿ ಸೇನಾ ಪಡೆಗಳಿಗೆ ನೀಡಲಾಗಿರುವ ವಿಶೇಷಾಧಿಕಾರ (ಎಎಫ್ಎಸ್ ಪಿಎ) ಯನ್ನು ಸಂಪೂರ್ಣ ಹಿಂಪಡೆಯುವ ಬಗ್ಗೆ ಪ್ರಧಾನಿ ಸುಳಿವು ನೀಡಿದ್ದಾರೆ. 

         ಅಸ್ಸಾಮ್ ನಲ್ಲಿ ಪೀಸ್, ಯೂನಿಟಿ, ಡೆವಲ್ಪ್ಮೆಂಟ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈಶಾನ್ಯ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಕಳೆದ 8 ವರ್ಷಗಳಿಂದ ಕಾನೂನು ಸುವ್ಯವಸ್ಥೆ ಸುಧಾರಣೆ ಕಂಡಿದ್ದು ಅಂತಹ ಪ್ರದೇಶಗಳಿಂದ ಸೇನಾ ಪಡೆಗಳಿಗೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆಯಬಹುದಾಗಿದೆ ಎಂದು ಹೇಳಿದ್ದಾರೆ. 

             ಪ್ರದೇಶದಲ್ಲಿ ಹಿಂಸಾಚಾರ ಇಳಿಕೆಯಾಗಿದ್ದು, ಕಾನೂನು ಜಾರಿಯಲ್ಲಿ ಹಲವು ಬದಲಾವಣೆಯಾಗಿವೆ. ಮೊದಲಿಗೆ ತ್ರಿಪುರಾದಿಂದ ಎಎಫ್ಎಸ್ ಪಿಎಯನ್ನು ತೆಗೆದುಹಾಕಲಾಯಿತು. ಆ ನಂತರ ಮೇಘಾಲಯದಲ್ಲಿ ತೆಗೆದುಹಾಕಲಾಯಿತು ಎಂದು ಮೋದಿ ತಿಳಿಸಿದ್ದಾರೆ.

             ಕಳೆದ 8 ವರ್ಷಗಳಲ್ಲಿ ಈಶಾನ್ಯ ರಾಜ್ಯಗಳ ಪೈಕಿ ಹಲವು ಪ್ರದೇಶಗಳಲ್ಲಿ ಕಾನೂನು ಸುಧಾರಣೆಯಾಗಿರುವೆಡೆ ಎಎಫ್ಎಸ್ ಪಿಎಯನ್ನು ತೆಗೆದುಹಾಕಲಾಗಿದೆ.  ಇನ್ನು ಉಳಿದ ಕಡೆಗಳಲ್ಲೂ ಅವುಗಳನ್ನು ತೆಗೆದುಹಾಕಲು ಯತ್ನಿಸುತ್ತಿದ್ದೇವೆ ಎಂದು ಮೋದಿ ಎಎಫ್ಎಸ್ ಪಿಎ ಹಿಂಪಡೆಯುವ ಸುಳಿವು ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries