ನವದೆಹಲಿ: ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಬಹಳಷ್ಟು ರಾಜಕೀಯ ಲೆಕ್ಕಾಚಾರಗಳು ಆರಂಭಗೊಂಡಿದ್ದು, ಖ್ಯಾತ ಚುನಾವಣಾ ತಂತ್ರಗಾರರೊಬ್ಬರು ಸೋನಿಯಾ ಗಾಂಧಿ ಜತೆ ಕೈಜೋಡಿಸಲಿರುವ ಸುಳಿವೊಂದು ಗೋಚರಿಸಿದೆ.
0
samarasasudhi
ಏಪ್ರಿಲ್ 16, 2022
ನವದೆಹಲಿ: ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಬಹಳಷ್ಟು ರಾಜಕೀಯ ಲೆಕ್ಕಾಚಾರಗಳು ಆರಂಭಗೊಂಡಿದ್ದು, ಖ್ಯಾತ ಚುನಾವಣಾ ತಂತ್ರಗಾರರೊಬ್ಬರು ಸೋನಿಯಾ ಗಾಂಧಿ ಜತೆ ಕೈಜೋಡಿಸಲಿರುವ ಸುಳಿವೊಂದು ಗೋಚರಿಸಿದೆ.
ಹೀಗೆ ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ಸೋನಿಯಾ ಗಾಂಧಿ ಜತೆ ಕೈ ಜೋಡಿಸಲಿರುವ ಚುನಾವಣಾ ತಂತ್ರಗಾರ ಬೇರಾರೂ ಅಲ್ಲ, ಪ್ರಶಾಂತ್ ಕಿಶೋರ್.
2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಂದು ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನೀಡಿದ ಪ್ರೆಸೆಂಟೇಷನ್ ಸಂದರ್ಭ ಪ್ರಶಾಂತ್ ಕಿಶೋರ್ಗೆ ಇಂಥದ್ದೊಂದು ಆಫರ್ ಸಿಕ್ಕಿದೆ ಎನ್ನಲಾಗುತ್ತಿದೆ. ಅವರಿಗೆ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಲಾಗಿದೆ. ಆದರೆ ಅವರಿಗೆ ಸಲಹೆಗಾರರಾಗಿ ಸೇರುವ ಬದಲು ಪಕ್ಷಕ್ಕೆ ಅಧಿಕೃತವಾಗಿ ಸೇರುವ ಜತೆಗೆ ನಾಯಕರಂತೆ ಕೆಲಸ ಮಾಡುವ ಆಹ್ವಾನ ನೀಡಲಾಗಿದೆ ಎಂದು ಮೂಲಗಳಿಂದ ಮಾಹಿತಿಯೊಂದು ಬಹಿರಂಗಗೊಂಡಿದೆ.
ಕಾಂಗ್ರೆಸ್ ಈಗಾಗಲೇ ಪ್ರಬಲವಾಗಿರುವಾಗ ರಾಜ್ಯಗಳಲ್ಲೇ ಹೆಚ್ಚಿನ ಗಮನ ಹರಿಸುವ ಸಲಹೆ ನೀಡಿದ್ದಾರೆ. ಅದರಲ್ಲೂ ಸಂವಹನ ವಿಭಾಗವನ್ನು ಸಂಪೂರ್ಣವಾಗಿ ಪರಿಷ್ಕರಿಸುವ ಜತೆಗೆ, ಸಂವಹನ ತಂತ್ರವನ್ನು ಮರುಸ್ಥಾಪಿಸುವ ಕೆಲಸ ಆಗಬೇಕಿದೆ ಎಂಬ ಸಲಹೆ ಕಾಂಗ್ರೆಸ್ಗೆ ನೀಡಿದ್ದಾರೆ ಎನ್ನಲಾಗಿದೆ.